ಮಂಗಳೂರು: ಬೆಂಗಳೂರಿನ ಸಾನಿಯಾ ಮತ್ತು ವೆಂಕಟ ಆರ್ ಅವರು ಭಾನುವಾರ ಆರಂಭಗೊಂಡ ರಾಜ್ಯ ವುಷು ಚಾಂಪಿಯನ್ಷಿಪ್ನ ಸಬ್ ಜೂನಿಯರ್ ವಿಭಾಗದ ಥಾವ್ಲು ಸ್ಪರ್ಧೆಯ ಗುನ್ಶು ಮತ್ತು ಚಾಂಖ್ವಾನ್ ವಿಭಾಗಗಳಲ್ಲಿ ಮೇಲುಗೈ ಸಾಧಿಸಿದರು.

ಕರ್ನಾಟಕ ರಾಜ್ಯ ವುಷು ಸಂಸ್ಥೆಯ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವುಷಿ ಸಂಸ್ಥೆ ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಚಾಂಪಿಯನ್ಷಿಪ್ನ ಬಾಲಕಿಯರ ಮತ್ತು ಬಾಲಕರ ವಿಭಾಗಗಳಲ್ಲಿ ಇವರಿಬ್ಬರೂ ತಲಾ ಎರಡು ಚಿನ್ನ ಗೆದ್ದುಕೊಂಡರು.

ಬಾಲಕಿಯರ ಗುನ್ಶು ಸ್ಪರ್ಧೆಯಲ್ಲಿ ಸಾನಿಯಾ 8.20 ಪಾಯಿಂಟ್ಗಳೊಂದಿಗೆ ಮೊದಲಿಗರಾದರು. ಬಾಲಕರ ವಿಭಾಗದಲ್ಲಿ ವೆಂಕಟ್ 7.27 ಪಾಯಿಂಟ್ ಗಳಿಸಿ ಚಿನ್ನ ತಮ್ಮದಾಗಿಸಿಕೊಂಡರು. ಬಾಲಕಿಯರ ಚಾಂಖ್ವಾನ್ನಲ್ಲಿ ಸಾನಿಯಾ 7.60 ಮತ್ತು ಬಾಲಕರ ವಿಭಾಗದಲ್ಲಿ ವೆಂಕಟ್ 7.45 ಪಾಯಿಂಟ್ ಸಾಧಿಸಿದರು.

ಫಲಿತಾಂಶಗಳು

ಬಾಲಕಿಯರ ಗುನ್ಶು: ಸಾನಿಯಾ (ಬೆಂಗಳೂರು)–1, ತನ್ವಿ ರೆಡ್ಡಿ (ಬೆಂಗಳೂರು)–2, ದಿವ್ಯಾ (ಬೆಂಗಳೂರು)–3

ಚಾಂಖ್ವಾನ್: ಸಾನಿಯಾ (ಬೆಂಗಳೂರು)–1, ಯಶ್ವಿತಾ (ಬೆಂಗಳೂರು)–2, ಪ್ರಣತಿ (ಮೈಸೂರು)–3

ಬಾಲಕರ ಗುನ್ಶು: ವೆಂಕಟ್ ಆರ್ (ಬೆಂಗಳೂರು)–1, ತನ್ಮಯ ಕೆ (ಬೆಂಗಳೂರು)–2, ಹರ್ಷಿತ್ ಕುಮಾರ್ (ಬೆಂಗಳೂರು)–3

ಚಾಂಖ್ವಾನ್: ವೆಂಕಟ್ (ಬೆಂಗಳೂರು)–1, ತನ್ಮಯ (ಬೆಂಗಳೂರು)–2, ಹರ್ಷಿತ್ ಕುಮಾರ್ (ಬೆಂಗಳೂರು)–3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.