ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌: ಸರಬ್ಜೋತ್, ಸುರುಚಿ ಪ್ರಥಮ

Published 1 ಮಾರ್ಚ್ 2024, 16:06 IST
Last Updated 1 ಮಾರ್ಚ್ 2024, 16:06 IST
ಅಕ್ಷರ ಗಾತ್ರ

ಭೋಪಾಲ್‌: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರುವ ಹರಿಯಾಣದ ಸರಬ್ಜೋತ್ ಸಿಂಗ್ ಅವರು ರಾಷ್ಟ್ರೀಯ ರೈಫಲ್/ ಪಿಸ್ತೂಲ್ ಆಯ್ಕೆ ಟ್ರಯಲ್ಸ್‌ನ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಟಿ–3 ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಅದೇ ರಾಜ್ಯದ ಸುರುಚಿ ಗೆಲುವು ಸಾಧಿಸಿದರು.

ಟ್ರಯಲ್ಸ್‌ನ ಕೊನೆಯ ದಿನವಾದ ಶುಕ್ರವಾರ ಸರಬ್ಜೋತ್ ಅವರು ಫೈನಲ್‌ನಲ್ಲಿ ನೌಕಾಪಡೆಯ ಕುನಾಲ್ ರಾಣಾ ಅವರಿಂದ ಕಠಿಣ ಸವಾಲನ್ನು ಎದುರಿಸಿದರು. ಸರಬ್ಜೋತ್ ಮತ್ತು ಕುನಾಲ್‌ ಕ್ರಮವಾಗಿ 244.8 ಮತ್ತು 243.9 ಪಾಯಿಂಟ್‌ ಗಳಿಸಿದರು. ಒಲಿಂಪಿಯನ್ ಗುರುಪ್ರೀತ್ ಸಿಂಗ್  ಮೂರನೇ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಹರಿಯಾಣದ ಸ್ಪರ್ಧಿಗಳೇ ಮೇಲುಗೈ ಸಾಧಿಸಿದರು. ಮೊದಲ ಮೂರು ಸ್ಥಾನವನ್ನು ಕ್ರಮವಾಗಿ ಸುರುಚಿ (242.8), ಸುರ್ಭಿ ರಾವ್ (240.3) ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ಪಾಲಕ್ 218.7) ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT