ಶೆಂಜೆನ್ (ಚೀನಾ): ಭಾರತದ ಸ್ಟಾರ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ನಲ್ಲಿ ಫೈನಲ್ಗೆ ಲಗ್ಗೆ ಹಾಕಿದರು.

ಎಂಟನೇ ಶ್ರೇಯಾಂಕದ ಚಿರಾಗ್– ಸಾತ್ವಿಕ್ ಜೋಡಿಯು ಶನಿವಾರ ಸೆಮಿಫೈನಲ್ ಹಣಾಹಣಿಯಲ್ಲಿ 21-17, 21-14ರಿಂದ ಎರಡನೇ ಶ್ರೇಯಾಂಕದ ಆರನ್ ಚಿಯಾ ಮತ್ತು ಸೋಹ್ ವೂಯಿ ಯಿಕ್ ಅವರಿಗೆ ಆಘಾತ ನೀಡಿ, ಸತತ ಎರಡನೇ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತು ತಲುಪಿತು.

ಉತ್ತಮ ಲಯದಲ್ಲಿರುವ ಭಾರತದ ಆಟಗಾರರು ಕಳೆದ ತಿಂಗಳು ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚು ಮತ್ತು ಕಳೆದ ವಾರ ಹಾಂಗ್ಕಾಂಗ್ ಓಪನ್ನಲ್ಲಿ ರನ್ನರ್ಸ್ ಅಪ್ ಆಗಿದ್ದರು. ಅದರ ಬೆನ್ನಲ್ಲೇ ಮತ್ತೊಂದು ಪ್ರಶಸ್ತಿಗೆ ಹತ್ತಿರವಾದರು.

ಸಾತ್ವಿಕ್–ಚಿರಾಗ್ ಅವರು ತಮ್ಮ ದೀರ್ಘಕಾಲದ ಪ್ರತಿಸ್ಪರ್ಧಿಗಳಾದ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಆರನ್ ಮತ್ತು ಸೋಹ್ ವಿರುದ್ಧ ಗೆಲುವಿನ ದಾಖಲೆಯನ್ನು 5–11ಕ್ಕೆ ಹೆಚ್ಚಿಸಿಕೊಂಡರು. ಪ್ಯಾರಿಸ್ನಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆಲ್ಲುವ ಹಾದಿಯಲ್ಲೂ ಭಾರತದ ಜೋಡಿಯು ಇದೇ ಆಟಗಾರರನ್ನು ಸೋಲಿಸಿತ್ತು.

ಮೊದಲ ಗೇಮ್ನಲ್ಲಿ ಉಭಯ ಜೋಡಿಗಳಿಂದ ಸಮಬಲದ ಪೈಪೋಟಿ ನಡೆಯಿತು. ಒಂದು ಹಂತದಲ್ಲಿ ಮಲೇಷ್ಯಾದ ಜೋಡಿ ಸತತ ನಾಲ್ಕು ಅಂಕ ಗಳಿಸಿ 10–7 ಮುನ್ನಡೆ ಸಾಧಿಸಿತ್ತು. ಆದರೆ, ಆರನ್ ಎಸಗಿದ ಮೂರು ತಪ್ಪುಗಳ ಲಾಭ ಪಡೆದ ಭಾರತದ ಜೋಡಿ ಚೇತರಿಸಿಕೊಂಡಿತು. ನಂತರದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಸಾತ್ವಿಕ್–ಚಿರಾಗ್ ಮುನ್ನಡೆಯನ್ನು ಹಿಗ್ಗಿಸುತ್ತಾ ಸಾಗಿ, ಮೇಲುಗೈ ಸಾಧಿಸಿತು.

ಎರಡನೇ ಗೇಮ್ನಲ್ಲಿ ಭಾರತದ ಆಟಗಾರರು ಆಕರ್ಷಕ ಸ್ಮ್ಯಾಷ್, ಚತುರ ಆಟ ಪ್ರದರ್ಶಿಸಿ ಆರಂಭದಲ್ಲೇ 8–2ರಲ್ಲಿ ಹಿಡಿತ ಸಾಧಿಸಿತು. ನಂತರದಲ್ಲಿ ಮಲೇಷ್ಯಾ ಆಟಗಾರರು ಹಿನ್ನಡೆಯನ್ನು 9–11ಕ್ಕೆ ಕುಗ್ಗಿಸಿ ಪ್ರತಿರೋಧ ತೋರುವ ಪ್ರಯತ್ನ ಮಾಡಿದರು. ಆದರೆ, ಚಿರಾಗ್ ಮತ್ತು ಸಾತ್ವಿಕ್ ಅವರ ನಿಖರ ಆಟದ ಮುಂದೆ ಮುಂಕಾದರು. ಕೇವಲ 41 ನಿಮಿಷದಲ್ಲಿ ಭಾರತದ ಜೋಡಿ ಜಯ ಸಾಧಿಸಿತು. ಭಾನುವಾರ ಫೈನಲ್ ಹಣಾಹಣಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.