ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಾತ್ವಿಕ್-ಚಿರಾಗ್‌ ಜೋಡಿಗೆ ಆಘಾತ 

ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಭಾರತ ಆಟಗಾರರಿಗೆ ನಿರಾಸೆ
Published 28 ಮೇ 2024, 15:13 IST
Last Updated 28 ಮೇ 2024, 15:13 IST
ಅಕ್ಷರ ಗಾತ್ರ

ಸಿಂಗಪುರ: ಭಾರತದ ಅಗ್ರಮಾನ್ಯ ಡಬಲ್ಸ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸಿಂಗಪುರ ಓಪನ್ ಸೂಪರ್‌ 750 ಬ್ಯಾಡ್ಮಿಂಟನ್ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಡೆನ್ಮಾರ್ಕ್‌ನ ಡೇನಿಯಲ್ ಲುಂಡ್ಗಾರ್ಡ್ ಮತ್ತು ಮ್ಯಾಡ್ಸ್ ವೆಸ್ಟರ್ಗಾರ್ಡ್ ವಿರುದ್ಧ ಮಂಗಳವಾರ ಆಘಾತ ಅನುಭವಿಸಿದರು. 

ಈ ತಿಂಗಳ ಆರಂಭದಲ್ಲಿ ಥಾಯ್ಲೆಂಡ್ ಓಪನ್ ಸೂಪರ್ 500 ಪ್ರಶಸ್ತಿ ಗೆದ್ದಿದ್ದ ಸಾತ್ವಿಕ್ ಮತ್ತು ಚಿರಾಗ್ ಜೋಡಿ, 47 ನಿಮಿಷಗಳ ಹೋರಾಟದಲ್ಲಿ ಡೇನಿಯಲ್ ಮತ್ತು ಮ್ಯಾಡ್ಸ್ ವಿರುದ್ಧ 20-22, 18-21 ಅಂತರದಲ್ಲಿ ಸೋಲು ಅನುಭವಿಸಿತು.

ಸಿಂಗಲ್ಸ್ ಸ್ಪರ್ಧೆಯಲ್ಲಿ ಆಕರ್ಷಿ ಕಶ್ಯಪ್ ಮತ್ತು ಪ್ರಿಯಾಂಶು ರಾಜವತ್ ಸಹ ಪರಭಾವಗೊಂಡರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 41ನೇ ಸ್ಥಾನದ ಕಶ್ಯಪ್ 7-21, 15-21ರಲ್ಲಿ 42ನೇ ಸ್ಥಾನದ ಥಾಯ್ಲೆಂಡ್‌ನ ಪೋರ್ನ್ಪಿಚಾ ಚೊಯಿಕಿವೊಂಗ್ ವಿರುದ್ಧ ಸೋತರೆ, ರಾಜವತ್ 21-23, 19-21ರಿಂದ ಹಾಂಕಾಂಗ್‌ನ ಲೀ ಚೆಯುಕ್ ಯಿಯು ವಿರುದ್ಧ ಪರಭಾವಗೊಂಡರು. 

ಮಹಿಳೆಯರ ಡಬಲ್ಸ್ ನಲ್ಲಿ  ಋತುಪರ್ಣ ಪಾಂಡಾ– ಶ್ವೇತಪರ್ಣ ಪಾಂಡಾ 12-21, 21-12, 13-21ರಲ್ಲಿ ಚಾಂಗ್ ಚಿಂಗ್ ಹುಯಿ ಮತ್ತು ಯಾಂಗ್ ಚಿಂಗ್ ತುನ್ (ಚೀನಾ ತೈಪೆ) ವಿರುದ್ಧ ಸೋತರು. 

ಮಿಶ್ರ ಡಬಲ್ಸ್‌ನಲ್ಲಿ ಆಶಿತ್ ಸೂರ್ಯ ಮತ್ತು ಅಮೃತಾ ಪ್ರಮುತೇಶ್ 8-21, 17-21ರಲ್ಲಿ ಲೀ ಚುನ್ ಹೈ ರೆಗಿನಾಲ್ಡ್ ಮತ್ತು ಎನ್ಜಿ ಸಿಜಿ ಯೊ (ಹಾಂಕಾಂಗ್‌) ವಿರುದ್ಧ ಸೋತರು.  

ಭಾರತದ ಅಗ್ರಮಾನ್ಯ ಆಟಗಾರರಾದ ಪಿ.ವಿ.ಸಿಂಧು, ಲಕ್ಷ್ಯ ಸೇನ್ ಮತ್ತು ಎಚ್.ಎಸ್.ಪ್ರಣಯ್ ಬುಧವಾರ ಸಿಂಗಲ್ಸ್‌ನಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT