ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ 9ರಿಂದ ರಾಷ್ಟ್ರೀಯ ಕುಸ್ತಿ ಶಿಬಿರ: ಭಾರತ ಒಲಿಂಪಿಕ್ಸ್‌ ಸಂಸ್ಥೆ

Published 1 ಜನವರಿ 2024, 16:33 IST
Last Updated 1 ಜನವರಿ 2024, 16:33 IST
ಅಕ್ಷರ ಗಾತ್ರ

ನವದೆಹಲಿ: ಪುರುಷರು ಮತ್ತು ಮಹಿಳಾ ಕುಸ್ತಿಪಟುಗಳಿಗೆ ರಾಷ್ಟ್ರೀಯ ಶಿಬಿರಗಳು ಕ್ರಮವಾಗಿ ಸೋನಿಪತ್ ಮತ್ತು ಪಟಿಯಾಲದಲ್ಲಿ ಫೆಬ್ರುವರಿ 9 ರಿಂದ ನಡೆಯಲಿವೆ ಎಂದು ಭಾರತ ಒಲಿಂಪಿಕ್ಸ್‌ ಸಂಸ್ಥೆ (‌ಐಒಎ) ರಚಿಸಿದ ತಾತ್ಕಾಲಿಕ ಸಮಿತಿ ಸೋಮವಾರ ತಿಳಿಸಿದೆ.

ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಮತ್ತು ವಿಶ್ವ ಅರ್ಹತಾ ಪಂದ್ಯಾವಳಿಗಳು ಹತ್ತಿರದಲ್ಲಿರುವುದರಿಂದ, ಫೆಬ್ರವರಿ 5 ರಂದು ಜೈಪುರದಲ್ಲಿ  ರಾಷ್ಟ್ರೀಯ ಸೀನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ ಮುಗಿದ ಕೂಡಲೇ ಶಿಬಿರಗಳು ಪ್ರಾರಂಭವಾಗಲಿವೆ.

ವುಶು ಅಸೋಸಿಯೇಷನ್ ಆಫ್ ಇಂಡಿಯಾದ ಮುಖ್ಯಸ್ಥ ಭೂಪೇಂದರ್ ಸಿಂಗ್ ಬಾಜ್ವಾ ನೇತೃತ್ವದ ತಾತ್ಕಾಲಿಕ ಸಮಿತಿಯು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಎಲ್ಲಾ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್ ಮುಕ್ತಾಯದ ನಂತರ, ರಾಷ್ಟ್ರೀಯ ತರಬೇತಿ ಶಿಬಿರ (ಎನ್‌ಸಿಸಿ) ನಡೆಸಲಾಗುವುದು. ಸೀನಿಯರ್‌ ಫ್ರೀ ಸ್ಟೈಲ್‌, ಗ್ರಿಕೊ ರೋಮನ್‌ ಸಾಯ್ ಎನ್ಆರ್‌ಸಿ ಸೋನಿಪತ್‌ನಲ್ಲಿ ಮತ್ತು ಮಹಿಳಾ ಶಿಬಿರವು ಪಟಿಯಾಲಾದಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ನಡೆಯಲಿದೆ ಎಂದು ಬಾಜ್ವಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2024ರ ಪ್ಯಾರಿಸ್ ಒಲಿಂಪಿಕ್ಸ್‌ವರೆಗೆ ಶಿಬಿರವನ್ನು ವಿಸ್ತರಿಸಲಾಗುವುದು. ಕುಸ್ತಿಪಟುಗಳಿಗೆ ತರಬೇತಿ ಅಥವಾ ಮುಂಬರುವ ಒಲಿಂಪಿಕ್ಸ್‌ ಅರ್ಹತಾ ಪಂದ್ಯಾವಳಿಗಳಿಗೆ ತರಬೇತಿ ನೀಡುವುದು ಪ್ರಾಥಮಿಕ ಆದ್ಯತೆಯಾಗಿದೆ. ಇವುಗಳಲ್ಲಿ ಏಪ್ರಿಲ್ 19-21 ರಿಂದ ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆಯಲಿರುವ 2024ರ ಏಷ್ಯನ್ ಅರ್ಹತಾ ಪಂದ್ಯಾವಳಿ ಮತ್ತು ಮೇ 9-12 ರಿಂದ ಟರ್ಕಿಯ ಇಸ್ತಾಂಬುಲ್‌ನಲ್ಲಿ ನಿಗದಿಯಾಗಿರುವ 2024ರ ವಿಶ್ವ ಅರ್ಹತಾ ಪಂದ್ಯಾವಳಿ ಒಳಗೊಂಡಿವೆ ಎಂದು ಬಾಜ್ವಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT