ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ ಧ್ವಜಧಾರಿ ಶರತ್ ಕಮಲ್

Published 21 ಮಾರ್ಚ್ 2024, 16:22 IST
Last Updated 21 ಮಾರ್ಚ್ 2024, 16:22 IST
ಅಕ್ಷರ ಗಾತ್ರ

ನವದೆಹಲಿ: ಹಿರಿಯ ಟೇಬಲ್ ಟೆನಿಸ್ ಆಟಗಾರ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಶರತ್ ಕಮಲ್ ಅವರು 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ. ಭಾರತದ ಬಾಕ್ಸಿಂಗ್ ತಾರೆ ಎಂ.ಸಿ ಮೇರಿ ಕೋಮ್ ಅವರನ್ನು ತಂಡದ ಷೆಫ್ ಡಿ ಮಿಷನ್ ಆಗಿ ಗುರುವಾರ ನೇಮಿಸಲಾಗಿದೆ

‘41 ವರ್ಷದ ಶರತ್‌ ಕಮಲ್, ಒಲಿಂಪಿಕ್ ವೇದಿಕೆಯಲ್ಲಿ ಭಾಗಿಯಾಗುತ್ತಿರುವ  ನಮ್ಮ ತಂಡದ ಏಕತೆ ಮತ್ತು ಸ್ಫೂರ್ತಿಯನ್ನು ಸಂಕೇತಿಸುತ್ತಾರೆ’ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಪ್ರಕಟಣೆಯಲ್ಲಿ ತಿಳಿಸಿದೆ.

‘ನಾನು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದೂ ಕೂಡ ಖಚಿತವಾಗಿರಲಿಲ್ಲ. ಆದರೆ ಸಿಂಗಪುರದಲ್ಲಿ ಕಳೆದ ವಾರ ಆಡಿದ ರೀತಿಯಿಂದ ರ‍್ಯಾಂಕಿಂಗ್‌ನಲ್ಲಿ 54 ಸ್ಥಾನ ಜಿಗಿದು, ಈ ಅವಕಾಶ ದೊರೆತು ಈಗ ಧ್ವಜದಾರಿಯಾಗುವ ಅವಕಾಶ ದೊರಕಿದೆ’ ಎಂದು ಶರತ್‌ ಪಿಟಿಐಗೆ ತಿಳಿಸಿದರು.

‘ಇದು ನನ್ನ ಐದನೇ ಮತ್ತು ಕೊನೆಯ ಒಲಿಂಪಿಕ್ಸ್ ಆಗಿರುವುದರಿಂದ ಅತಿದೊಡ್ಡ ಗೌರವವಾಗಿದೆ. ವಿಶ್ವದಲ್ಲಿ ಹೆಚ್ಚಿನ ಟಿಟಿ ಆಟಗಾರರಿಗೆ ಈ ಗೌರವ ದೊರೆತಿಲ್ಲ. ನನಗೆ ಐಒಎಯಿಂದ ಕರೆ ಬಂತು. ನಂಬಲಾಗಲಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ರ‍್ಯಾಂಕಿಂಗ್ ಆಧಾರದಲ್ಲಿ ಇತ್ತೀಚೆಗೆ ಭಾರತ ಪುರುಷರ ಮತ್ತು ಮಹಿಳೆಯರ ತಂಡಗಳು ಮೊದಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದವು.

ಚೆಫ್‌ ಡಿ ಆಗಿ ನೇಮಕಗೊಂಡಿರುವ ಮೇರಿ ಕೋಮ್‌ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರಿಗೆ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಶಿವ ಕೇಶವನ್ ನೆರವಾಗಲಿದ್ದಾರೆ. ಅವರನ್ನು ಶಿವ ಕೇಶವನ್ ಅವರನ್ನು ಡೆಪ್ಯುಟಿ ಷೆಫ್‌ ಡಿ ಮಿಷನ್ ಆಗಿ ನೇಮಕ ಮಾಡಲಾಗಿದೆ.

ಒಲಿಂಪಿಕ್ಸ್‌ ರೈಫಲ್ ಶೂಟಿಂಗ್‌ನಲ್ಲಿ ಕಂಚಿನ ಪದಕ ವಿಜೇತ ಗಗನ್ ನಾರಂಗ್ ಅವರು ಶೂಟಿಂಗ್ ರೇಂಜ್‌ನಲ್ಲಿ ಭಾರತದ ಸ್ಪರ್ಧೆಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಈ ಸ್ಪರ್ಧೆ ಒಲಿಂಪಿಕ್‌ ಮುಖ್ಯ ತಾಣದಿಂದ ಬಹಳ ದೂರದಲ್ಲಿದೆ.

ಶೂಟಿಂಗ್‌ನಲ್ಲಿ ಭಾರತವು ತನ್ನ ಅತಿದೊಡ್ಡ ಶೂಟಿಂಗ್ ಪ್ಯಾರಿಸ್‌ಗೆ ಕಳುಹಿಸಲಿದ್ದು, 19 ಮಂದಿ ಈಗಾಗಲೇ ಕೋಟಾಗಳನ್ನು ಪಡೆದಿದ್ದಾರೆ.

ಈ ನೇಮಕಗಳ ಬಗ್ಗೆ ಪ್ರತಿಕ್ರಿಯಿಸಿರುವ ಐಒಎ ಅಧ್ಯಕ್ಷೆ ಪಿ.ಟಿ.ಉಷಾ, ‘ಪ್ಯಾರಿಸ್ 2024ರ ಒಲಿಂಪಿಕ್ ಕ್ರೀಡೆಗಳಿಗೆ ವೈವಿಧ್ಯಮಯ ಕ್ರೀಡಾಪಟುಗಳ ಮತ್ತು ಸಮರ್ಥ ಅಧಿಕಾರಿಗಳ ತಂಡವನ್ನು ಹೊಂದಿರುವುದು ಸಂತಸ ಮೂಡಿಸಿದೆ. ಅವರ ಪರಿಣತಿ, ಸಮರ್ಪಣಾ ಭಾವ ಮತ್ತು ಕ್ರೀಡೆಯ ಮೇಲಿನ ಪ್ರೀತಿ ನಮ್ಮ ಸ್ಪರ್ಧಿಗಳಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಪ್ರೇರೇಪಿಸಲಿದೆ’ ಎಂದು ಹೇಳಿದ್ದಾರೆ. 

ಮೇರಿ ಕೋಮ್
ಮೇರಿ ಕೋಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT