ಬೆಂಗಳೂರು: ಗೋಲುಗಳ ಸುರಿಮಳೆಗರೆದ ಶ್ಲೋಕ್ ಹಾಕಿ ಕ್ಲಬ್ ತಂಡವು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಡಿ.ಎಸ್. ಮೂರ್ತಿ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಜಯಗಳಿಸಿತು.

ಗುರುವಾರ ನಡೆದ ಪಂದ್ಯದಲ್ಲಿ ಶ್ಲೋಕ್ ಹಾಕಿ ತಂಡವು 10–2ರಿಂದ ಬಾಂಬರ್ಸ್ ಹಾಕಿ ಕ್ಲಬ್ ವಿರುದ್ಧ ಜಯಿಸಿತು.

ಶ್ಲೋಕ್ ತಂಡದ ಮೊಹಮ್ಮದ್ ಹರಹಾದ್ (13ನಿ, 17ನಿ), ಕೆ.ಎಮ್. ವಿಶ್ವನಾಥ್ (18ನಿ, 33ನಿ, 35ನಿ, 54ನಿ), ಎ.ಪಿ. ವಿನೋದ್ ಕುಮಾರ್ (23ನಿ), ಪಿಚಾ ತರುಣಕುಮಾರ್ (41ನೇ ನಿ), ಎಸ್. ಸಂದೀಪ್ (44ನಿ) ಹಾಗೂ ರಾಜು (49ನಿ) ಗೋಲು ಗಳಿಸಿದರು. ಬಾಂಬರ್ಸ್ ತಂಡದ ಕೆ. ವಿಘ್ನೇಷ್ (25ನಿ) ಮತ್ತು ಬಿ. ಭರತ್ ರಾಜ್ (32ನಿ) ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು.

ಎರಡನೇ ಪಂದ್ಯದಲ್ಲಿ ರೈಸಿಂಗ್ ಸ್ಟಾರ್ ಹಾಕಿ ಕ್ಲಬ್ ತಂಡವು 4–1ರಿಂದ ಡೆಲ್ಲಿ ಪಬ್ಲಿಕ್ ಶಾಲೆ (ಡಿಪಿಎಸ್) ವಿರುದ್ಧ ಗೆದ್ದಿದ್ದಾರೆ.

ರೈಸಿಂಗ್ ಸ್ಟಾರ್ ತಂಡದ ಗೋಕುಲ್ (4ನಿ), ಗೋವಿಂದ್ (18ನಿ), ರಾಯನ್ ರಾಡ್ರಿಗಸ್ (54ನಿ) ಮತ್ತು ಸುಂದರ್ ರಾಜ್ (59ನಿ) ಗೆಲುವಿಗೆ ಕಾಣಿಕೆ ನೀಡಿದರು. ಡಿಪಿಎಸ್ ತಂಡಕ್ಕಾಗಿ ಮೊಹಮ್ಮದ್ ಸಿಯಾಸ್ (38ನಿ) ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.