ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಟಲಿ: ಶಾಟ್‌ಗನ್ ವಿಶ್ವಕಪ್‌ ಇಂದಿನಿಂದ, 12 ಮಂದಿಯ ಭಾರತ ತಂಡ ಕಣಕ್ಕೆ

Published 11 ಜೂನ್ 2024, 15:27 IST
Last Updated 11 ಜೂನ್ 2024, 15:27 IST
ಅಕ್ಷರ ಗಾತ್ರ

ನವದೆಹಲಿ: ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ ಶ್ರೇಯಸಿ ಸಿಂಗ್ ಸೇರಿದಂತೆ 12 ಮಂದಿ ಭಾರತದ ಶೂಟರ್‌ಗಳು ಬುಧವಾರ ಇಟಲಿಯ ಲೊನಾಟೊದಲ್ಲಿ ನಡೆಯಲಿರುವ ಐಎಸ್‌ಎಸ್‌ಎಫ್‌ ಶಾಟ್‌ಗನ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

‍ಪುರುಷರ ಮತ್ತು ಮಹಿಳೆಯರ ವಿಭಾಗದ ಟ್ರ್ಯಾಪ್‌ ಸ್ಪರ್ಧೆಗಳು ನಡೆಯಲಿವೆ. ಭಾರತ ಈ ಎಲ್ಲಾ ವಿಭಾಗಗಳಲ್ಲಿ ಮೂರು ಮಂದಿಯ ತಂಡಗಳನ್ನು ಕಣಕ್ಕಿಳಿಸಿದೆ.

ಇಲ್ಲಿ ಗೆಲ್ಲುವ ಪದಕಗಳಿಂದ ಶೂಟರ್‌ಗಳಿಗೆ ಪಾಯಿಂಟ್‌ಗಳು ದೊರೆಯಲಿವೆ. ಇವು ಒಲಿಂಪಿಕ್ಸ್ ಸ್ಥಾನ ಪಡೆಯಲು ನೆರವಾಗಲಿದೆ. ಈಗಾಗಲೇ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಪಿಸ್ತೂಲ್ ಮತ್ತು ರೈಫಲ್ ವಿಭಾಗದಲ್ಲಿ ಸ್ಪರ್ಧಿಸುವ ಒಟ್ಟು 15 ಮಂದಿಯ ತಂಡಗಳನ್ನು ಪ್ರಕಟಿಸಲಾಗಿದೆ.

ಪೃಥ್ವಿರಾಜ್ ತೊಂಡೈಮನ್, ವಿವಾನ್ ಕಪೂರ್‌ ಮತ್ತು ಭೌನೀಶ್ ಮೆಂಡಿರಟ್ಟಾ ವಿಶ್ವಕಪ್‌ನ ಪುರುಷರ ಟ್ರ್ಯಾಪ್ ವಿಭಾಗದಲ್ಲಿ, ರಾಜೇಶ್ವರಿ ಕುಮಾರಿ, ಶ್ರೇಯಸಿ ಮತ್ತು ಮನಿಶ್ ಕೀರ್ ಮಹಿಳೆಯರ ಟ್ರ್ಯಾಪ್ ವಿಭಾಗದ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಪ್ರತಿ ಸ್ಪರ್ಧೆಗಳಲ್ಲಿ ಮೊದಲ ಆರು ಸ್ಥಾನ ಪಡೆದವರು ಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ. ಎರಡು ಸುತ್ತುಗಳ ಕ್ವಾಲಿಫಿಕೇಷನ್ ನಂತರ ಗುರುವಾರ ಫೈನಲ್ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT