ಜಕಾರ್ತ: ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ.ಸಿಂಧು ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದ ಫೈನಲ್ ಪ್ರವೇಶಿಸಿದರು. ಶನಿವಾರ ಇಲ್ಲಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಅವರು ಚೀನಾದ ಚೆನ್ ಯೂಫಿ ವಿರುದ್ಧ 21–19, 21–10ರಲ್ಲಿ ಗೆದ್ದರು.
ಈ ಋತುವಿನ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸಿಂಧು ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಜಪಾನ್ನ ಅಕಾನೆ ಯಮಗುಚಿ ಸವಾಲನ್ನು ಎದುರಿಸುವರು. ಸಿಂಧು ಮತ್ತು ಯಮಗುಚಿ ಈವರೆಗೆ ಒಟ್ಟು 14 ಬಾರಿ ಸೆಣಸಿದ್ದು 10ರಲ್ಲಿ ಸಿಂಧು ಜಯಗಳಿಸಿದ್ದಾರೆ.