ಮುಂಬೈ (ರಾಯಿಟರ್ಸ್): ಕೊರೊನಾ ಸೋಂಕು ವ್ಯಾಪಿಸುತ್ತಿರುವ ಪರಿಣಾಮ ಹಲವು ಕಡೆ ‘ಲಾಕ್‌ಡೌನ್’ ಮಾಡಲಾಗಿದ್ದು, ತರಬೇತಿಹೋಗಲುಸಾಧ್ಯವಾಗುತ್ತಿಲ್ಲ. ಹೀಗಾಗಿ ಟೋಕಿಯೊ ಕ್ರೀಡೆಗಳನ್ನು ಮುಂದೂಡಬೇಕು ಎಂದು ಭಾರತದ ಕೆಲವು ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ.

ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಾಲ್ ಈಗಾಗಲೇ ಆತಂಕ ವ್ಯಕ್ತಪಡಿಸಿದ್ದಾರೆ. ‘ಈಗ ಎಲ್ಲರೂ ಸಾಮಾಜಿಕ ಅಂತರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಒಲಿಂಪಿಕ್ಸ್‌ನಲ್ಲಿ ಇದೆಲ್ಲಾ ಸಾಧ್ಯವಾಗುವುದಿಲ್ಲ. ಕ್ರೀಡಾ ಗ್ರಾಮದಲ್ಲಿ ಸಾವಿರಾರು ಅಥ್ಲೀಟುಗಳು ನೆಲೆಸುತ್ತಾರೆ’ ಎಂದಿದ್ದಾರೆ.ಒಲಿಂಪಿಕ್ಸ್ ಮುಂದೂಡುವುದೊಂದೇ ಈಗ ಇರುವ ಏಕೈಕ ಆಯ್ಕೆ ಎಂದು ಹಿರಿಯ ಟೆನಿಸ್ ಆಟಗಾರ ಮಹೇಶ್ ಭೂಫತಿ ಹೇಳಿದರು.

‘ಚೀನಾದಲ್ಲಿ ಈಗ ಸೋಂಕು ಹತೋಟಿಗೆ ಬಂದಿದೆ. ಮುಂದಿನ ಎರಡು ತಿಂಗಳಲ್ಲಿ ಎಲ್ಲರೂ ಸರಿದಾರಿಗೆ ಬರಲಿದೆ’ ಎಂದು ಐಒಎ ಮಹಾಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ‘ರಾಯಿಟರ್ಸ್’ಗೆ ತಿಳಿಸಿದರು. ‘ನಿಗದಿ ಸಮಯಕ್ಕೆ ಐಒಸಿ ಒಲಿಂಪಿಕ್ಸ್ ನಡೆಸುವ ನಿರೀಕ್ಷೆಯಿದೆ’ ಎಂದರು.

‘ಒಲಿಂಪಿಕ್ಸ್ ಭವಿಷ್ಯಕ್ಕೆ ಸಂಬಂಧಿಸಿ ಐಒಎ ತೆಗೆದುಕೊಳ್ಳುವ ನಿರ್ಧಾರಕ್ಕೆ ತಲೆಬಾಗುವುದಾಗಿ’ ಹಿರಿಯ ಆಟಗಾರ್ತಿ ಸಾನಿಯಾ ಮಿರ್ಜಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.