ನವದೆಹಲಿ: ಭವಿಷ್ಯದಲ್ಲಿ ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ದೇಶದ ಆರು ಕ್ರೀಡಾಕೇಂದ್ರಗಳನ್ನು ಖೇಲೊ ಇಂಡಿಯಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿದ್ದು ಇದಕ್ಕಾಗಿ ₹67.32 ಕೋಟಿ ಬಿಡುಗಡೆ ಮಾಡಿದೆ. ಇದು ನಾಲ್ಕು ವರ್ಷಗಳ ಯೋಜನೆಯಾಗಿದೆ.

ಗುವಾಹಟಿಯ ಸರುಸಾಜೈನಲ್ಲಿರುವ ಕ್ರೀಡಾ ಅಕಾಡೆಮಿ, ಶಿಲಾಂಗ್‌ನಲ್ಲಿರುವ ಜೆ.ಎನ್.ಎಸ್ ಸಂಕೀರ್ಣ, ಗಾಂಗ್ಟಾಕ್‌ನಲ್ಲಿರುವ ಪಲ್ಜೋರ್ ಕ್ರೀಡಾಂಗಣ, ಸಿಲ್ವಾಸಾ ಕ್ರೀಡಾ ಸಂಕಿರ್ಣ, ಮಧ್ಯಪ್ರದೇಶ ಕ್ರೀಡಾ ಅಕಾಡೆಮಿ ಮತ್ತು ಪುಣೆಯ ಬಾಳೇವಾಡಿಯಲ್ಲಿರುವ ಶಿವ ಛತ್ರಪತಿ ಕ್ರೀಡಾ ಸಂಕೀರ್ಣಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ಇವುಗಳಿಗೆ ಕ್ರಮವಾಗಿ ₹7.96 ಕೋಟಿ, ₹ 8.39 ಕೋಟಿ, ₹7.91 ಕೋಟಿ, ₹8.05,₹ 19 ಕೋಟಿ ಮತ್ತು ₹ 16 ಕೋಟಿ ಒದಗಿಸಿದೆ.

’2028ರ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆಲ್ಲುವ ಪ್ರಮುಖ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇರಬೇಕು ಎಂಬುದು ಸರ್ಕಾರದ ಆಶಯ. ಇದಕ್ಕಾಗಿ ಹಲವು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಅವುಗಳ ಪೈಕಿ ಒಂದು ಇದು‘ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದರು.

‘ಪ್ರತಿಯೊಂದು ಕೇಂದ್ರದಲ್ಲಿ ನಿರ್ದಿಷ್ಟ ಕ್ರೀಡೆಯಲ್ಲಿ ವಿಶ್ವ ದರ್ಜೆಯ ತರಬೇತಿ ನೀಡಲಾಗುವುದು. ಇದಕ್ಕಾಗಿ ಈಗ ಇರುವ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು, ಕ್ರೀಡಾವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು, ಅತ್ಯುತ್ತಮ ಕೋಚ್‌ಗಳನ್ನು ನೇಮಿಸಲಾಗುವುದು. ಫಿಸಿಯೋಥೆರಪಿಸ್ಟ್, ಸ್ಟ್ರೆಂಥ್ ಆ್ಯಂಡ್ ಕಂಡಿಷನಿಂಗ್ ತಜ್ಞರನ್ನು ಒಳಗೊಂಡ ಕ್ರೀಡಾವಿಜ್ಞಾನ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಲಾಗುವುದು‘ ಎಂದು ರಿಜಿಜು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.