ನವದೆಹಲಿ: ಭಾರತದ ಅನುಭವಿ ಈಜುಪಟು ಶ್ರೀಹರಿ ನಟರಾಜ್ ಅವರು ಫ್ರಾನ್ಸ್ನ ಕ್ಯಾನೆಟ್ ಎನ್ ರೌಸಿಲೋನ್ನಲ್ಲಿ ನಡೆದ 30ನೇ ಮೇರ್ ನಾಸ್ಟ್ರಮ್ ಪ್ರವಾಸದಲ್ಲಿ 50 ಮೀಟರ್ ಬ್ಯಾಕ್ಸ್ಟ್ರೋಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು.

ಟೋಕಿಯೊ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ನಟರಾಜ್ ಅವರು, ಶನಿವಾರ ಇಲ್ಲಿ 25.50 ಸೆಕೆಂಡ್ಗಳಲ್ಲಿ ಗುರಿ ತಲುಪಿ ಕೂದಲೆಳೆಯ ಅಂತರದಲ್ಲಿ ಚಿನ್ನವನ್ನು ತಪ್ಪಿಸಿಕೊಂಡರು. ಹಂಗೇರಿಯ ಆಡಮ್ ಜಸ್ಜೊ (25.46 ಸೆಕೆಂಡ್) ಸ್ವರ್ಣ ಪದಕ ಗೆದ್ದರು. ಬ್ರಿಟನ್ನ ಸ್ಕಾಟ್ ಗಿಬ್ಸನ್ (25.64 ಸೆ) ಕಂಚಿನ ಪದಕ ಜಯಿಸಿದರು.

50 ಮೀ ಬ್ಯಾಕ್ಸ್ಟ್ರೋಕ್ ಒಲಿಂಪಿಕ್ಸ್ನಲ್ಲಿ ಇರದ ಸ್ಪರ್ಧೆಯಾಗಿದೆ. ಪ್ಯಾರಿಸ್ ಕ್ರೀಡಾಕೂಟಕ್ಕೆ ಭಾರತದ ಯಾವುದೇ ಈಜುಪಟುಗಳು ಈವರೆಗೆ ಅರ್ಹತೆಯನ್ನು ಪಡೆದಿಲ್ಲ.

ಸಜನ್ ಪ್ರಕಾಶ್ ಮತ್ತು ನಟರಾಜ್ ಅವರು ಅರ್ಹತಾ ಮಾನದಂಡವನ್ನು ಪೂರೈಸಿ 2021ರ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದ್ದರು. ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಭಾರತದ ಈಜುಪಟುಗಳು ಅವರಾಗಿದ್ದಾರೆ.

ಶನಿವಾರ ಆರಂಭವಾದ ಮೇರ್ ನಾಸ್ಟ್ರಮ್ ಪ್ರವಾಸವು ಮೊನಾಕೊ, ಬಾರ್ಸಿಲೋನಾ ಮತ್ತು ಕ್ಯಾನೆಟ್ ನಗರಗಳಲ್ಲಿ ಒಂಬತ್ತು ದಿನಗಳ ಸ್ಪರ್ಧೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.