ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಕ್ವಾರ್ಟರ್‌ ಫೈನಲ್‌ಗೆ ಬಿಸಿವೈಎ, ಆರ್ಯನ್ಸ್

Published 1 ಜೂನ್ 2023, 14:53 IST
Last Updated 1 ಜೂನ್ 2023, 14:53 IST
ಅಕ್ಷರ ಗಾತ್ರ

ಬೆಂಗಳೂರು: ಬಿಸಿವೈಎ ಮತ್ತು ಮೈಸೂರಿನ ಆರ್ಯನ್ಸ್ ಕ್ಲಬ್‌ ತಂಡಗಳು ರಾಜ್ಯ ‘ಸಿ’ ಡಿವಿಷನ್‌ ಲೀಗ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದವು.

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬಿಸಿವೈಎ 75–63 ರಲ್ಲಿ ಎಚ್‌ಬಿಆರ್‌ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡವನ್ನು ಮಣಿಸಿತು. ಸೋಹನ್‌ (24) ಮತ್ತು ಅಶ್ವಥ್‌ (16) ಅವರು ಬಿಸಿವೈಎ ಗೆಲುವಿನಲ್ಲಿ ಗಮನ ಸೆಳೆದರು.

ಆರ್ಯನ್ಸ್‌ ಕ್ಲಬ್‌ ತಂಡ 80–42 ರಲ್ಲಿ ಚಿಕ್ಕಬಳ್ಳಾಪುರದ ಸರ್‌ ಎಂ.ವಿ. ಡೈಮಂಡ್‌ ಕ್ಲಬ್‌ ವಿರುದ್ಧ ಗೆದ್ದಿತು. ವಿಜಯಿ ತಂಡದ ಸಾರ್ಥಕ್ (20) ಮತ್ತು ಶಕ್ತಿ (18) ಮಿಂಚಿದರು.

ಯಲಹಂಕ ನ್ಯೂಟೌನ್‌ ಕ್ಲಬ್‌ 75– 55 ರಲ್ಲಿ ಕೋಲಾರದ ವೈಎಫ್‌ಬಿಸಿ ವಿರುದ್ಧ ಗೆದ್ದರೆ, ವೈಎಂಎಂಎ 77–59 ರಲ್ಲಿ ಹೆಬ್ಬಾಳ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡವನ್ನು ಮಣಿಸಿತು.

ಇತರ ಪಂದ್ಯಗಳಲ್ಲಿ ಚಿಕ್ಕಮಗಳೂರಿನ ಡಾಮಿನೇಟ್‌ ಕ್ಲಬ್‌ 54–34 ರಲ್ಲಿ ಸಿಜೆಸಿ ವಿರುದ್ಧ; ಡಿಆರ್‌ಡಿಒ 62–43 ರಲ್ಲಿ ಹಲಸೂರು ಎಸ್‌.ಯು ವಿರುದ್ಧ; ಮೌಂಟ್ಸ್‌ ಕ್ಲಬ್‌ 50–43 ರಲ್ಲಿ ಎಸ್‌ಬಿಐ ವಿರುದ್ಧ; ಬೆಂಗಳೂರು ವ್ಯಾಂಗಾರ್ಡ್ಸ್ 65–64 ರಲ್ಲಿ ಹೊಯ್ಸಳ ಕ್ಲಬ್‌ ವಿರುದ್ಧ; ಪಿಪಿಸಿ 53–52 ರಲ್ಲಿ ಪಟ್ಟಾಭಿರಾಮ್ ಕ್ಲಬ್‌ ವಿರುದ್ಧ; ರಾಜಕುಮಾರ್‌ ಕ್ಲಬ್‌ 84– 76 ರಲ್ಲಿ ಓರಿಯನ್ಸ್‌ ಕ್ಲಬ್‌ ವಿರುದ್ದ ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT