ದಾವಣಗೆರೆ: ಕರ್ನಾಟಕ ಕುಸ್ತಿ ಸಂಘವು ಇದೇ ಮೊದಲ ಬಾರಿಗೆ ತೀರ್ಪುಗಾರರಿಗಾಗಿ ರಾಜ್ಯಮಟ್ಟದ ಕಾರ್ಯಾಗಾರ ಹಮ್ಮಿಕೊಂಡಿದೆ. ಆಗಸ್ಟ್ 24 ಮತ್ತು 25ರಂದು ನಗರದ ಆಂಜನೇಯ ಬಡಾವಣೆಯ ಒಳಾಂಗಣ ಕ್ರೀಡಾಂಗಣ ದಲ್ಲಿ ಕಾರ್ಯಾಗಾರ ನಡೆಯಲಿದೆ.
‘ಡಬ್ಲ್ಯುಎಫ್‌ಐನ ಪ್ರತಿನಿಧಿಯೊಬ್ಬರು ಪಾಲ್ಗೊಳ್ಳುತ್ತಿದ್ದು, ತೀರ್ಪುಗಾರರಿಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ. ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ, ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ತೀರ್ಪುಗಾರರಾಗಿ ಕೆಲಸ ಮಾಡಿದ ಅನುಭವವುಳ್ಳ 60 ವರ್ಷದೊಳಗಿನ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ₹3,000 ಪ್ರವೇಶ ಶುಲ್ಕ ಇದ್ದು, ಇಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣ ಪತ್ರದೊಂದಿಗೆ ಕಿಟ್ ನೀಡಲಾಗುತ್ತದೆ. ಆ.24ರಂದು ಬೆಳಿಗ್ಗೆ 8 ರಿಂದ 10 ಗಂಟೆಯೊಳಗೆ ಒಳಾಂಗಣ ಕ್ರೀಡಾಂಗಣದಲ್ಲಿ ಹೆಸರು ನೋಂದಾಯಿಸಿಕೊಳ್ಳ ಬಹುದು’ ಎಂದು ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ತಿಳಿಸಿದ್ದಾರೆ.
ಮಾಹಿತಿಗೆ ಕರ್ನಾಟಕ ಕುಸ್ತಿ ಸಂಘದ ತಾಂತ್ರಿಕ ಸಮಿತಿ ಅಧ್ಯಕ್ಷ ಕೆ. ವಿನೋದ್ ಕುಮಾರ್ (ಮೊ 8971388143) ಸಂಪರ್ಕಿಸಬಹುದು.