ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೇಬಲ್‌ ಟೆನಿಸ್‌: ಆಕಾಶ್‌, ತೃಪ್ತಿ ಚಾಂಪಿಯನ್‌

Published : 18 ಆಗಸ್ಟ್ 2024, 16:26 IST
Last Updated : 18 ಆಗಸ್ಟ್ 2024, 16:26 IST
ಫಾಲೋ ಮಾಡಿ
Comments

ಹೊಸಪೇಟೆ: ಆಕಾಶ್‌ ಕೆ.ಜೆ ಮತ್ತು ತೃಪ್ತಿ ಪುರೋಹಿತ್ ಅವರು ಇಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಇಲ್ಲಿನ ಟಿ.ಬಿ.ಡ್ಯಾಮ್‌ ರಿಕ್ರಿಯೇಷನ್‌ ಕ್ಲಬ್‌ನಲ್ಲಿ ವಿಜಯನಗರ ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆ ಆಶ್ರಯದಲ್ಲಿ ಟೂರ್ನಿ ಹಮ್ಮಿಕೊಳ್ಳಲಾಗಿತ್ತು.

ಪುರುಷರ ಫೈನಲ್‌ನಲ್ಲಿ ಆಕಾಶ್‌ 11-5, 6-11, 9-11, 11-9, 11-8, 11-4ರಿಂದ ಶ್ರೇಯಲ್ ತೆಲಂಗ್ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಆಕಾಶ್‌ 11-9, 9-11, 10-12, 6-11, 11-5, 11-9, 11-2ರಿಂದ ಅಭಿನವ್‌ ಕೆ. ಮೂರ್ತಿ ವಿರುದ್ಧ; ಶ್ರೇಯಲ್‌ 7-11, 5-11, 12-10, 11-13, 11-6, 11-9, 11-9ರಿಂದ ರಕ್ಷಿತ್‌ ಆರ್‌.ಬಿ ವಿರುದ್ಧ ಗೆಲುವು ಸಾಧಿಸಿದ್ದರು.

ಮಹಿಳೆಯರ ಫೈನಲ್‌ನಲ್ಲಿ ತೃಪ್ತಿ 8-11, 9-11, 11-9, 17-15, 11-9, 11-9ರಿಂದ ವೇದಲಕ್ಷ್ಮಿ ಡಿ.ಕೆ. ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ತೃಪ್ತಿ 11-9, 10-12, 6-11, 11-9, 11-9, 11-9ರಿಂದ ದೇಶ್ನಾ ಎಂ. ವಂಶಿಕಾ ವಿರುದ್ಧ; ವೇದಲಕ್ಷ್ಮಿ 11-5, 11-5, 12-14, 11-6, 13-11ರಿಂದ ಹಿಮಾಂಶಿ ಚೌಧರಿ ವಿರುದ್ಧ ಜಯ ಸಾಧಿಸಿದ್ದರು.

19 ವರ್ಷದೊಳಗಿನ ಬಾಲಕರ ವಿಭಾಗದ ಪ್ರಶಸ್ತಿಯನ್ನು ರೋಹಿತ್‌ ಶಂಕರ್‌ ಗೆದ್ದರು. ಅವರು ಫೈನಲ್‌ನಲ್ಲಿ 11-7, 11- 8, 8-11, 6-11, 11-7, 11-4ರಿಂದ ಸಂಜಯ್‌ ಮಾಧವನ್‌ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ರೋಹಿತ್‌ 11-7, 12-10, 11- 5ರಿಂದ ಅರ್ಣವ್‌ ಎನ್‌. ವಿರುದ್ಧ; ಸಂಜಯ್‌ 11-8, 11-4, 12-10ರಿಂದ ಬಿ.ಆರ್‌. ಗೌರವ್‌ ವಿರುದ್ಧ ನೇರ ಗೇಮ್‌ಗಳ ಜಯ ಗಳಿಸಿದ್ದರು.

19 ವರ್ಷದೊಳಗಿನ ಬಾಲಕಿಯರ ವಿಭಾಗ ಫೈನಲ್‌ನಲ್ಲಿ ಸಹನಾ ಎಚ್‌. ಮೂರ್ತಿ 11-7, 11-13, 8-11, 11-8, 6-11, 11- 8, 15-13ರಿಂದ ಹಿಮಾಂಶಿ ಚೌಧರಿ ಅವರನ್ನು ಮಣಿಸಿ ಪ್ರಶಸ್ತಿಯನ್ನು ಜಯಿಸಿದರು. ಸೆಮಿಫೈನಲ್‌ನಲ್ಲಿ ಸಹನಾ 9-11, 10-12, 11-9, 14-12, 11-7ರಿಂದ ತೃಪ್ತಿ ಪುರೋಹಿತ್‌ ವಿರುದ್ಧ; ಹಿಮಾಂಶಿ 11-8, 6-11, 11-6, 11-5ರಿಂದ ದೇಶ್ನಾ ವಿರುದ್ಧ ಗೆಲುವು ಸಾಧಿಸಿದ್ದರು.

ತಂಡ ವಿಭಾಗದ ಪ್ರಶಸ್ತಿಯನ್ನು ಬಿಎನ್‌ಎಂ ‘ಎ’ ತಂಡ ಗೆದ್ದುಕೊಂಡಿತು. ಅಭಿನವ್ ಕೆ. ಮೂರ್ತಿ, ಶ್ರೀಕಾಂತ್ ಕಶ್ಯಪ್, ಶ್ರೇಯಲ್ ತೆಲಂಗ್, ಅಶ್ವಿನ್ ಎಚ್. ಅವರನ್ನು ಒಳಗೊಂಡ ತಂಡವು ಫೈನಲ್‌ನಲ್ಲಿ 3–2 ಗೇಮ್‌ಗಳಿಂದ ಅಕೋಲೇಡ್ಸ್‌ ತಂಡವನ್ನು ಮಣಿಸಿತು.

ಪ್ರಶಸ್ತಿಯೊಂದಿಗೆ ಸಹನಾ ಎಚ್‌. ಮೂರ್ತಿ ಮತ್ತು ರೋಹಿತ್‌ ಶಂಕರ್‌
ಪ್ರಶಸ್ತಿಯೊಂದಿಗೆ ಸಹನಾ ಎಚ್‌. ಮೂರ್ತಿ ಮತ್ತು ರೋಹಿತ್‌ ಶಂಕರ್‌
ತಂಡ ವಿಭಾಗದ ಪ್ರಶಸ್ತಿ ಗೆದ್ದ ಬಿಎನ್‌ಎಂ ‘ಎ’ ತಂಡದ ಅಭಿನವ್ ಕೆ. ಮೂರ್ತಿ ಶ್ರೀಕಾಂತ್ ಕಶ್ಯಪ್ ಶ್ರೇಯಲ್ ತೆಲಂಗ್ ಅಶ್ವಿನ್ ಎಚ್. 
ತಂಡ ವಿಭಾಗದ ಪ್ರಶಸ್ತಿ ಗೆದ್ದ ಬಿಎನ್‌ಎಂ ‘ಎ’ ತಂಡದ ಅಭಿನವ್ ಕೆ. ಮೂರ್ತಿ ಶ್ರೀಕಾಂತ್ ಕಶ್ಯಪ್ ಶ್ರೇಯಲ್ ತೆಲಂಗ್ ಅಶ್ವಿನ್ ಎಚ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT