ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಈಜು: ಇಶಾನ್, ಹಷಿಕಾ ನೂತನ ದಾಖಲೆ

Published 1 ಜೂನ್ 2023, 17:03 IST
Last Updated 1 ಜೂನ್ 2023, 17:03 IST
ಅಕ್ಷರ ಗಾತ್ರ

ಬೆಂಗಳೂರು: ಡಾಲ್ಫಿನ್ ಅಕ್ವೆಟಿಕ್ಸ್‌ನ ಇಶಾನ್ ಮೆಹ್ರಾ ಹಾಗೂ ಹಷಿಕಾ ರಾಮಚಂದ್ರ ಅವರು ಬಸವನಗುಡಿ ಈಜುಕೇಂದ್ರದಲ್ಲಿ ನಡೆಯುತ್ತಿರುವ ಎನ್‌ಆರ್‌ಜೆ ರಾಜ್ಯ ಈಜು ಚಾಂಪಿಯನ್‌ಷಿಪ್‌ನಲ್ಲಿ ನೂತನ ದಾಖಲೆ ನಿರ್ಮಿಸಿದರು.

ಎರಡನೇ ಗುಂಪಿನ ಬಾಲಕರ ವಿಭಾಗದಲ್ಲಿ 50 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್ ಹಾಗೂ 50 ಮೀಟರ್ ಫ್ರೀಸ್ಟೈಲ್‌ನಲ್ಲಿ ದಾಖಲೆ ಬರೆದರು. ಒಂದನೇ ಗುಂಪಿನ ಬಾಲಕಿಯರ 200 ಮೀಟರ್ ಬಟರ್‌ಫ್ಲೈನಲ್ಲಿ ಹಷಿಕಾ ರಾಮಚಂದ್ರ  2 ನಿಮಿಷ 20.70ಸೆಕೆಂಡುಗಳಲ್ಲಿ ಗುರಿ ಮುಟ್ಟಿ ನೂತನ ದಾಖಲೆ ನಿರ್ಮಿಸಿದರು.

ಫಲಿತಾಂಶಗಳು

ಪುರುಷರು: 800 ಮೀ ಫ್ರೀಸ್ಟೈಲ್: ಅನೀಷ್ ಎಸ್ ಗೌಡ (ಕಾಲ: 8ನಿ,27.22ಸೆ)–1, ಶಿವಾಂಕ್ ವಿಶ್ವನಾಥ –2, ಧ್ಯಾನ್ ಬಾಲಕೃಷ್ಣ –3 (ಮೂವರೂ ಬಸವನಗುಡಿ ಈಜುಕೇಂದ್ರದವರು)

200 ಮೀ ಬಟರ್‌ಫ್ಲೈ: ಉತ್ಕರ್ಷ್ ಎಸ್ ಪಾಟೀಲ (2ನಿ, 10.06ಸೆ)–1, ಆದಿತ್ಯ ಪ್ರಭು –2, ಶ್ರೇಯಸ್ ವೆಂಕಟೇಶ್ –3 (ಮೂವರೂ ಬಸವನಗುಡಿ ಈಜುಕೇಂದ್ರದವರು)

50 ಮೀ ಬ್ಯಾಕ್‌ಸ್ಟ್ರೋಕ್: ಎಸ್. ಶಿವಾ (ಬಸವನಗುಡಿ; 27.46ಸೆ)–1, ಉತ್ಕರ್ಷ್ ಪಾಟೀಲ (ಬಸವನಗುಡಿ)–2, ಎಂ. ಧ್ಯಾನ್ (ಗ್ಲೋಬಲ್)–3

50 ಮೀ ಫ್ರೀಸ್ಟೈಲ್: ತನೀಷ್  ಜಾರ್ಜ್ ಮ್ಯಾಥ್ಯೂ (ಬಸವನಗುಡಿ; 23.85ಸೆ)–1, ಆರ್. ಸಂಭವ್ (ಡಾಲ್ಫಿನ್)–2, ಎಂ. ಪೃಥ್ವಿ (ಬಸವನಗುಡಿ)–3

ಬಾಲಕರು

ಗುಂಪು 1:

50 ಮೀ ಬ್ಯಾಕ್‌ಸ್ಟ್ರೋಕ್: ಆಕಾಶ ಮಣಿ(ಬಸವನಗುಡಿ; 27.14ಸೆ)–1, ಅಮನ್ ಅಭಿಜಿತ್ ಸುಣಗಾರ (ಡಾಲ್ಫಿನ್)–2, ಎಸ್. ವಿಶ್ವನಾಥನ್ (ಪಿ.ಎಂ. ಸ್ವಿಮ್ಮಿಂಗ್ ಸೆಂಟರ್)–3

50 ಮೀ ಫ್ರೀಸ್ಟೈಲ್: ಎಸ್. ವಿಶ್ವನಾಥನ್ (ಪಿ.ಎಂ. ಈಜುಕೇಂದ್ರ; 24.43ಸೆ)–1, ರಿಷಭ್ ಸಿಂಗ್ ಧಡ್ವಾಲ್ (ಡಾಲ್ಫಿನ್)–2, ಚಿಂತನ್ ಎಸ್ ಶೆಟ್ಟಿ (ಮಂಗಲಾ ಈಜುಕ್ಲಬ್)–3

800 ಮೀ ಫ್ರೀಸ್ಟೈಲ್: ಪವನ ಧನಂಜಯ್ (8ನಿ,45.74ಸೆ)–1, ಎಸ್. ದರ್ಶನ್ –2, ಎಸ್‌. ದಕ್ಷಣ್ –3 (ಮೂವರು ಬಸವನಗುಡಿ ಈಜುಕೇಂದ್ರ)

200 ಮೀ ಬಟರ್‌ಫ್ಲೈ: ಎಸ್. ದರ್ಶನ್ (ಬಸವನಗುಡಿ; 2ನಿ,08.38ಸೆ)–1, ಎಸ್. ಧನುಷ್ (ಬಸವನಗುಡಿ)–2, ಕಾರ್ತಿಕೆಯನ್ ನಾಯರ್ (ಡಾಲ್ಫಿನ್)–3

ಗುಂಪು 2: 200 ಮೀ ಬಟರ್‌ಫ್ಲೈ: ಅಕ್ಷಜ್ ಠಾಕೂರಿಯಾ (ಡಾಲ್ಫಿನ್; 2ನಿ, 15.79ಸೆ)–1, ಹರಿಕಾರ್ತಿಕ್ ವೇಲು (ಗೋಲ್ಡನ್ ಫಿನ್ಸ್)–2, ಅನಿಶ್ ಎ ಕೋರೆ (ಬಸವನಗುಡಿ)–3.

ಗುಂಪು 2: 50 ಮೀ ಬ್ಯಾಕ್‌ಸ್ಟ್ರೋಕ್: ಇಶಾನ್ ಮೆಹ್ರಾ (ಡಾಲ್ಫಿನ್; ನೂತನ ದಾಖಲೆ: 28.71ಸೆ)–1, ಇದಾಂತ್ ಶಾಶ್ವತ್ ಚತುರ್ವೇದಿ (ಪಿ.ಎಂ.ಈಜುಕೇಂದ್ರ)–2, ವಾಫಿ ಅಬ್ದುಲ್ ಹಕೀಂ (ಬಸವನಗುಡಿ)–3

50 ಮೀ ಫ್ರೀಸ್ಟೈಲ್: ಇಶಾನ್ ಮೆಹ್ರಾ (ಡಾಲ್ಫಿನ್ : ನೂತನ ದಾಖಲೆ: 24.78ಸೆ)–1, ಸಾತ್ವಿಕ್ ಎನ್. ಸುಜೀರ್ (ಡಾಲ್ಫಿನ್)–2, ನಿಶಾಂತ್ ಜೆ. (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–3

4X100 ಮೀ ಮೆಡ್ಲೆ: ಬಸವನಗುಡಿ ಈಜುಕೇಂದ್ರ (4ನಿ, 17.92ಸೆ)–1, ಡಾಲ್ಫಿನ್ –2, ಬಿಎಸಿ (ಬಿ)–3

ಗುಂಪು 3: 50 ಮೀ ಬ್ಯಾಕ್‌ಸ್ಟ್ರೋಕ್: ಅಮಿತ್ ಪವನ್ (ಗ್ಲೋಬಲ್ ಸ್ವಿಮ್ ಸೆಂಟರ್; 38.18ಸೆ)–1, ರಕ್ಷಿತ್ ಎ ಕೋರೆ (ಬಸವನಗುಡಿ)–2, ಶಾನ್ ಫ್ಯಾಬಿಯನ್ (ಡಿಕೆವಿ)–3

50 ಮೀ ಫ್ರೀಸ್ಟೈಲ್: ಎಸ್. ಕ್ರಿಷ್ (ಬಸವನಗುಡಿ; 30.59ಸೆ)–1, ನಿಖಿಲ್ ತೇಜ್ ರೆಡ್ಡಿ (ಬಸವನಗುಡಿ)–2, ಅಮಿತ್ ಪವನ್ ಎಚ್ (ಗ್ಲೋಬಲ್)–3

4X50ಮೀ ಮೆಡ್ಲೆ: ಬಸವನಗುಡಿ ಈಜುಕೇಂದ್ರ ಎ (2ನಿ,30.34ಸೆ)–1, ಡಾಲ್ಫಿನ್ ಅಕ್ವೆಟಿಕ್ಸ್–2, ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್ –3

ಮಹಿಳೆಯರು:

50 ಮೀ ಫ್ರೀಸ್ಟೈಲ್: ನಿನಾ ವೆಂಕಟೇಶ್ (ಡಾಲ್ಫಿನ್; ನೂತನದಾಖಲೆ 26.65ಸೆ)–1, ಲತೀಷಾ ಮಂದಣ್ಣ (ರೇ ಅಕ್ವೆಟಿಕ್ ಸೆಂಟರ್)–2, ರಿತು ಭರಮರೆಡ್ಡಿ (ಬಸವನಗುಡಿ)–3

800 ಮೀ ಫ್ರೀಸ್ಟೈಲ್: ಅಷ್ಮಿತಾ ಚಂದ್ರ (ರೇ ಅಕ್ವೆಟಿಕ್ ಸೆಂಟರ್; 9ನಿ,38.54ಸೆ)–1, ಅನುಮತಿ ಚೌಗುಲೆ (ಬಸವನುಗುಡಿ)–2, ಬಿ.ಜಿ. ಮಧುರಾ (ಬಸವನಗುಡಿ)–3

200 ಮೀ ಬಟರ್‌ಫ್ಲೈ: ಎ.ಜಿದಿದಾ (ಡಿಕೆವಿ ಅಕ್ವೆಟಿಕ್ ಸೆಂಟರ್; 2ನಿ,31.45ಸೆ)–1, ಥಿತಿಕ್ಷಾ ಹನುಮಂತರಾಜು (ಬಸವನಗುಡಿ)–2, ಅನ್ನಾ ಸ್ಪೂರ್ತಿ ತೆರೇಸಾ (ಡಾಲ್ಫಿನ್)–3

50 ಮೀ ಬ್ಯಾಕ್‌ಸ್ಟ್ರೋಕ್: ಸುವರ್ಣ ಸಿ ಭಾಸ್ಕರ್ (ಡಾಲ್ಫಿನ್; 30.35ಸೆ)–1, ರಿತು ಭರಮರೆಡ್ಡಿ (ಬಸವನಗುಡಿ)–2, ನೀಲಾಂಜನ ಸೀಲ್ (ಗ್ಲೋಬಲ್)–3

ಬಾಲಕಿಯರು: ಗುಂಪು 1: 800 ಮೀ ಫ್ರೀಸ್ಟೈಲ್: ಶಿರಿನ್ (ಬಸವನಗುಡಿ; 9ನಿ,32.59ಸೆ)–1, ಅದಿತಿ ಎನ್. ಮೂಲ್ಯಾ (ಬಸವನಗುಡಿ)–2, ಎಂ.ಪಿ. ಆಮಾ (ಡಾಲ್ಫಿನ್)–3.

50 ಮೀ ಬ್ಯಾಕ್‌ಸ್ಟ್ರೋಕ್: ರಿಧಿಮಾ ವೀರೇಂದ್ರಕುಮಾರ್ (ಬಸವನಗುಡಿ; 30.52ಸೆ)–1, ಆರುಷಿ ಅಗರವಾಲ್ (ಡಾಲ್ಫಿನ್)–2, ಶಾಲಿನಿ ಆರ್ ದೀಕ್ಷಿತ್ (ಡಾಲ್ಫಿನ್)–3

200 ಮೀ ಬಟರ್‌ಫ್ಲೈ: ಹಷಿಕಾ ರಾಮಚಂದ್ರ (ಡಾಲ್ಫಿನ್; ನೂತನ ದಾಖಲೆ: 2ನಿ,20.70ಸೆ)–1, ಬಿ.ಎಂ. ರಿತಿಕಾ (ಬಸವನಗುಡಿ)–2, ಸಬಾ ಸುಹಾನ (ಡಾಲ್ಫಿನ್)–3

50 ಮೀ ಫ್ರೀಸ್ಟೈಲ್: ಮಾನವಿ ವರ್ಮಾ (ಡಾಲ್ಫಿನ್; 27.49ಸೆ)–1, ವಿನೀತಾ ನಯನಾ (ಬಸವನಗುಡಿ)–2, ಶಾಲಿನಿ ಆರ್ ದೀಕ್ಷಿತ್ (ಡಾಲ್ಫಿನ್)–3

ಗುಂಪು 2: 50 ಮೀ ಬ್ಯಾಕ್‌ಸ್ಟ್ರೋಕ್: ನೈಷಾ (ಬಸವನಗುಡಿ; 31.98ಸೆ)–1, ಎಂ.ಎನ್. ತಾನ್ಯಾ (ಬಸವನಗುಡಿ)–2, ಕೌಸಮಿ ಕೆ. ಮೊನ್ಯಾ (ಪುತ್ತೂರು ಅಕ್ವೆಟಿಕ್ ಕ್ಲಬ್)–3

50 ಮೀ ಫ್ರೀಸ್ಟೈಲ್: ರಿಯಾನಾ ಧೃತಿ ಫರ್ನಾಂಡಿಸ್ (ಡಾಲ್ಫಿನ್; 29.20ಸೆ)–1, ಎ. ಶಾನವಿ (ಡಿಕೆವಿ)–2, ಪಿ.ವಿ. ಸಂಜನಾ (ಬಸವನಗುಡಿ)–3

ಗುಂಪು 3: 50 ಮೀ ಬ್ರೆಸ್ಟ್‌ಸ್ಟ್ರೋಕ್: ವಿ. ಸುಮೇಧಾ (ಡಿಕೆವಿ; 37.28ಸೆ)–1, ಅವನಿ ಬೆಳ್ಳಿಯಪ್ಪ (ಡಿಕೆವಿ)–2, ವಿಭಾ ರೆಡ್ಡಿ ಮರಮ್ (ಡಾಲ್ಫಿನ್)–‌3.

50 ಮೀ ಫ್ರೀಸ್ಟೈಲ್: ದಿಶಾ ಹೊಂಡಿ  (ಎಬಿಬಿಎ ಸ್ಪೋರ್ಟ್ಸ್‌ ಕ್ಲಬ್; 32.37ಸೆ)–1, ಮಾನ್ಯಾ ಆರ್ ವಾಧ್ವಾ (ಪಿ.ಎಂ. ಈಜುಕೇಂದ್ರ)–2, ಮುಂಜಂದಿರಾ ನಿರ್ವಿ ಪೂಣಚ್ಚ (ಬಸವನಗುಡಿ)–3

4X50ಮೀ ಮೆಡ್ಲೆ: ಡಾಲ್ಫಿನ್ (2ನಿ, 32.09ಸೆ)–1, ಗೋಲ್ಡನ್ ಫಿನ್ಸ್ ಸ್ಪೋರ್ಟ್ಸ್‌ ಕ್ಲಬ್–2, ಡಿಕೆವಿ ಅಕ್ವೆಟಿಕ್ –3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT