ಬರ್ಮಿಂಗ್ಹ್ಯಾಮ್: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಮಂಗಳವಾರ ಇಲ್ಲಿ ಆರಂಭವಾಗುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಲಾಗುತ್ತಿಲ್ಲ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಕಾರಣ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದ್ದರಿಂದ ಭಾರತದ ತಾರೆ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ.

ಸಿಂಧು ಮತ್ತು ಕೋಚ್ ಇರ್ವಾನ್ಸ್ಯಾ ಆದಿ ಪ್ರಥಮ ಅವರನ್ನು ಒಳಗೊಂಡ ತಂಡವು ಬೆಂಗಳೂರಿನಿಂದ ಬರ್ಮಿಂಗ್ಹ್ಯಾಮ್ಗೆ ಹೊರಟಿತ್ತು. ದುಬೈನಿಂದ ವಿಮಾನ ಬದಲಾಯಿಸಬೇಕಿತ್ತು. ಆದರೆ, ವಿಮಾನಗಳ ಹಾರಾಟ ರದ್ದಾದ ಕಾರಣ ಅವರಲ್ಲರೂ ದುಬೈನಲ್ಲಿಯೇ ಸಿಲುಕಿಕೊಂಡರು. ಸೂಪರ್ 1000 ಹಂತದ ಟೂರ್ನಿಯ ಮೊದಲ ಸುತ್ತಿನಲ್ಲಿ ಸಿಂಧು ಅವರು ಥಾಯ್ಲೆಂಡ್ನ ಸುಪಾನಿಡಾ ಕಟೆಥಾಂಗ್ ಅವರನ್ನು ಎದುರಿಸಬೇಕಿತ್ತು.

ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಕೂಡ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ವಿಳಂಬ ಅಥವಾ ಮಾರ್ಗ ಬದಲಾವಣೆಯಿಂದಾಗಿ ಸಮಸ್ಯೆ ಅನುಭವಿಸುತ್ತಿರುವ ತಂಡಗಳಿಗೆ ನೆರವು ನೀಡಲು ಸಿದ್ಧವಿರುವುದಾಗಿ ಹೇಳಿದೆ. ಯಾವುದೇ ಆಟಗಾರರು ವಿಳಂಬವಾಗಿ ಬಂದಲ್ಲಿ ಸ್ಪರ್ಧೆಯ ವೇಳಾಪಟ್ಟಿಯನ್ನು ಪರಿಷ್ಕರಿಸುವುದೂ ಇದರಲ್ಲಿ ಸೇರಿದೆ.

ಕೆಲ ಆಟಗಾರರು ಸಿಂಗಪುರ ಮತ್ತು ಆಫ್ರಿಕಾದ ಪರ್ಯಾಯ ಮಾರ್ಗಗಳ ಮೂಲಕ ಬರ್ಮಿಂಗ್ಹ್ಯಾಮ್ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಲಕ್ಷ್ಯ ಸೇನ್ ಮತ್ತು ಉದಯೋನ್ಮುಖ ಯುವ ಆಟಗಾರ ಆಯುಷ್ ಶೆಟ್ಟಿ ಅವರು ಯಾವುದೇ ಪ್ರಯಾಣದ ಸಮಸ್ಯೆಗಳನ್ನು ಎದುರಿಸದೇ ಇಲ್ಲಿಗೆ ತಲುಪಿದ್ದಾರೆ. 24 ವರ್ಷದ ಲಕ್ಷ್ಯ ಅವರು ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಶಿ ಯು ಕಿ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಕನ್ನಡಿಗ ಆಯುಷ್ ಆರಂಭಿಕ ಸುತ್ತಿನಲ್ಲಿ ಇಂಡೊನೇಷ್ಯಾದ ಅಲ್ವಿ ಫರ್ಹಾನ್ ವಿರುದ್ಧ ಸೆಣಸಲಿದ್ದಾರೆ.

ಮಾಜಿ ರನ್ನರ್ ಅಪ್ ಆಗಿರುವ ಲಕ್ಷ್ಯ ಅವರಿಗೆ ಚೀನಾ ಆಟಗಾರನ ವಿರುದ್ಧ ಕಠಿಣ ಸವಾಲು ಎದುರಾಗಬಹುದು. ಶಿ ವಿರುದ್ಧದ ಈ ಹಿಂದಿನ ಐದು ಮುಖಾಮುಖಿಯಲ್ಲಿ ಭಾರತದ ಆಟಗಾರ ನಾಲ್ಕರಲ್ಲಿ ಸೋತಿದ್ದಾರೆ. ಅಮೆರಿಕ ಓಪನ್ ಸೂಪರ್ 300 ಚಾಂಪಿಯನ್ ಆಗಿರುವ 20 ವರ್ಷದ ಆಯುಷ್ ಅವರು ಫರ್ಹಾನ್ ವಿರುದ್ಧದ ಐದು ಮುಖಾಮುಖಿಗಳಲ್ಲಿ ಮೂರರಲ್ಲಿ ಸೋತಿದ್ದು, ಇಲ್ಲಿ ಸುಧಾರಿತ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.

ಮಹಿಳಾ ಸಿಂಗಲ್ಸ್ನಲ್ಲಿ ಮಾಳವಿಕಾ ಬನ್ಸೋಡ್ ಅವರಿಗೂ ಕಠಿಣ ಸವಾಲು ಎದುರಾಗಿದೆ. 24 ವರ್ಷದ ಬನ್ಸೋಡ್ ಮೊದಲ ಸುತ್ತಿನಲ್ಲಿ ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಚೆನ್ ಯುಫಿ (ಚೀನಾ) ಅವರನ್ನು ಎದುರಿಸುವರು.

ಆಫ್ರಿಕಾ ಮಾರ್ಗವಾಗಿ ಬಂದಿರುವ ಉದಯೋನ್ಮುಖ ಆಟಗಾರ್ತಿ ಉನ್ನತಿ ಹೂಡಾ ತನ್ನ ಮೊದಲ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಪೊರ್ನ್ಪೊವಿ ಚೊಚುವಾಂಗ್ (ಥಾಯ್ಲೆಂಡ್) ಅವರನ್ನು ಎದುರಿಸಲಿದ್ದಾರೆ.

ಪುರುಷರ ಡಬಲ್ಸ್ ಸ್ಟಾರ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾದ ಕಾಂಗ್ ಖೈ ಕ್ಸಿಂಗ್ ಮತ್ತು ಆರನ್ ಟೈ ವಿರುದ್ಧ ಅಭಿಯಾನ ಆರಂಭಿಸುವರು. 2022 ಮತ್ತು 2023ರಲ್ಲಿ ಮಹಿಳೆಯರ ಡಬಲ್ಸ್ನಲ್ಲಿ ಸೆಮಿಫೈನಲ್ ತಲುಪಿದ್ದ ಟ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಯು ಜಪಾನ್ನ ಸಯಾಕಾ ಹಿರೋಟಾ ಮತ್ತು ಅಯಾಕೊ ಸಕುರಾಮೊಟೊ ಅವರನ್ನು ಎದುರಿಸಲಿದ್ದಾರೆ.

ಪ್ರಕಾಶ್ ಪಡುಕೋಣೆ (1980) ಮತ್ತು ಪುಲ್ಲೇಲ ಗೋಪಿಚಂದ್ (2001) ಹೊರತುಪಡಿಸಿ ಭಾರತದ ಷಟ್ಲರ್ಗಳಿಗೆ ಆಲ್ ಇಂಗ್ಲೆಂಡ್ ಪ್ರಶಸ್ತಿ ಒಲಿದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸೈನಾ ನೆಹ್ವಾಲ್ (2015ರ ರನ್ನರ್ ಅಪ್) ಮತ್ತು ಲಕ್ಷ್ಯ (2022ರ ರನ್ನರ್ ಅಪ್) ಪ್ರಶಸ್ತಿಗೆ ಹತ್ತಿರವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.