ಪ್ರಾಗ್ (ಝೆಕ್ ರಿಪಬ್ಲಿಕ್),: ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರಿಗೆ ಗೆಲುವು ಸತತವಾಗಿ ಕೈಕೊಡುತ್ತಿದೆ. ಪ್ರಾಗ್ ಅಂತರರಾಷ್ಟ್ರೀಯ ಚೆಸ್ ಟೂರ್ನಿಯ ಐದನೇ ಸುತ್ತಿನಲ್ಲಿ ಅವರು ಉಜ್ಬೇಕಿಸ್ತಾನದ ನಾದಿರ್ಬೆಕ್ ಅಬ್ದುಸತ್ತಾರೋವ್ ಎದುರು ಅತ್ಯುತ್ತಮ ಸ್ಥಿತಿಯಲ್ಲಿದ್ದರೂ, ಲೋಪವೆಸಗಿ ಸೋಲನುಭವಿಸಿದರು.

ತಿಂಗಳ ಹಿಂದಷ್ಟೇ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಅವರು ಇದೇ ಆಟಗಾರನ ಎದುರು ಉತ್ತಮ ಸ್ಥಿತಿಯಲ್ಲಿದ್ದರೂ ಅಬ್ದುಸತ್ತಾರೋವ್ಗೆ ಮಣಿದಿದ್ದರು. ಆದರೆ ಭಾನುವಾರ ನಡೆದ ಪಂದ್ಯದಲ್ಲಿ ಅವರು ಆಟದ ಮಧ್ಯಮಹಂತದಲ್ಲಿ ಗೆಲುವು ಪಡೆಯುವ ಸ್ಥಿತಿಯಲ್ಲಿದ್ದರು. ಆದರೆ ಕೊನೆಯ ಹಂತದಲ್ಲಿ ಎಡವಿದರು. ಎರಡು ಸಂದರ್ಭಗಳಲ್ಲಿ ಅವರಿಂದ ತಪ್ಪಾಯಿತು.

ಭಾರತದ ಆಟಗಾರನಿಗೆ ಇದು ಎರಡನೇ ಸೋಲು. ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು 1.5 ಅಂಕ ಸಂಗ್ರಹಿಸಿದ್ದಾರೆ. 10 ಆಟಗಾರರ ಟೂರ್ನಿ 9 ಸುತ್ತುಗಳನ್ನು ಹೊಂದಿದೆ.

ಡಚ್ ಗ್ರ್ಯಾಂಡ್ಮಾಸ್ಟರ್ ಜೋರ್ಡನ್ ವಾನ್ ಫಾರಿಸ್ಟ್ (4) ಅವರು ಸತತ ನಾಲ್ಕನೇ ಪಂದ್ಯದಲ್ಲಿ ಜಯಗಳಿಸಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಲೈವ್ ರೇಟಿಂಗ್ನಲ್ಲಿ ಅವರು ಈಗ ವಿಶ್ವ ಕ್ರಮಾಂಕದಲ್ಲಿ 11ನೇ ಸ್ಥಾನಕ್ಕೇರಿದ್ದಾರೆ. ಅವರು ಈ ಬಾರಿ ಅಮೆರಿಕದ ಹ್ಯಾನ್ಸ್ ಮೋಕ್ ನೀಮನ್ (1.5) ವಿರುದ್ಧ ಜಯಗಳಿಸಿದರು.

ಹಾಲಿ ಚಾಂಪಿಯನ್, ಭಾರತದ ಅರವಿಂದ ಚಿದಂಬರಮ್ (1.5) ಅವರು ಐದು ಪಂದ್ಯಗಳಲ್ಲಿ ಮೂರನೇ ಬಾರಿ ಸೋಲನುಭವಿಸಿದರು.

ಸ್ಥಳೀಯ ಆಟಗಾರ ಡೇವಿಡ್ ನವಾರ (3.5) ಸಹ ಯಶಸ್ಸಿನ ಓಟ ಮುಂದುವರಿಸಿ ಉಜ್ಬೇಕ್ ತಾರೆ ನಾದಿರ್ಬೆಕ್ ಯಾಕುಬೊಯೆವ್ (2) ಅವರನ್ನು ಸೋಲಿಸಿದರು.

ಚಾಲೆಂಜರ್ಸ್ ವಿಭಾಆಗದಲ್ಲಿ ಸೂರ್ಯಶೇಖರ ಗಂಗೂಲಿ (1) ಅವರು ಸ್ವದೇಶದ ಆಟಗಾರ್ತಿ, ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್ ಅವರಿಗೆ ಮಣಿಸಿದರು. ಈ ವಿಭಾಗದಲ್ಲಿ ಝೆಕ್ ಆಟಗಾರ ಫಿನೆಕ್ ವಾಂಕ್ಲಾವ್ (4) ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.