ನವದೆಹಲಿ: ಭಾರತದ ಪ್ಯಾರಾ ಜಾವೆಲಿನ್ ಪಟು ಸುಮಿತ್ ಅಂಟಿಲ್ ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಸತತ ಮೂರನೇ ಬಾರಿ ಪುರುಷರ ಎಫ್64 ವಿಭಾಗದಲ್ಲಿ ಚಿನ್ನ ಗೆದ್ದು ಹ್ಯಾಟ್ರಿಕ್ ಪೂರೈಸಿದರು.

ಮಂಗಳವಾರ ನಡೆದ ಜಾವೆಲಿನ್ ಸ್ಪರ್ಧೆಯಲ್ಲಿ ಸುಮಿತ್ ಅವರು ತಮ್ಮ ಐದನೇ ಯತ್ನದಲ್ಲಿ 71.37 ಮೀ. ದೂರ ಎಸೆದಿದ್ದು ಅವರ ಉತ್ತಮ ಥ್ರೊ ಎನಿಸಿತು. 27 ವರ್ಷ ವಯಸ್ಸಿನ ಸುಮಿತ್ ಈ ಹಿಂದೆ 2023 ಮತ್ತು 2024ರ ಆವೃತ್ತಿಗಳಲ್ಲೂ ಚಾಂಪಿಯನ್ ಆಗಿದ್ದರು.

ಇಂದಿನ ಸಾಧನೆ ಅವರ ವೈಯಕ್ತಿಕ ಶ್ರೇಷ್ಠವೂ ಆಗಿದೆ. ಕಳೆದ ವರ್ಷದ ಚಾಂಪಿಯನ್ಷಿಪ್ನಲ್ಲಿ ಅವರು 70.83 ಮೀ. ದೂರ ಎಸೆದಿದ್ದು ಇದುವರೆಗಿನ ಅತ್ಯುತ್ತಮ ಎನಿಸಿತ್ತು.

ಪ್ಯಾರಾಲಿಂಪಿಕ್ಸ್ನಲ್ಲೂ ಅವರು ಎರಡು ಬಾರಿಯ (2021ರ ಟೋಕಿಯೊ ಮತ್ತು 2024ರ ಪ್ಯಾರಿಸ್) ಚಿನ್ನದ ಪದಕ ವಿಜೇತರಾಗಿದ್ದಾರೆ. ಹಾಲಿ ಪ್ಯಾರಾ ಏಷ್ಯನ್ ಗೇಮ್ಸ್ ಚಾಂಪಿಯನ್ ಕೂಡ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.