ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಯಲ್ಲಿ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಸುಮಿತ್ ಸಂಗ್ವಾನ್ ಶುಭಾರಂಭ

Last Updated 15 ಸೆಪ್ಟೆಂಬರ್ 2021, 16:35 IST
ಅಕ್ಷರ ಗಾತ್ರ

ಬಳ್ಳಾರಿ: ಏಷ್ಯನ್ ಪದಕವಿಜೇತ ಬಾಕ್ಸರ್ ಸುಮಿತ್ ಸಂಗ್ವಾನ್ ಬುಧವಾರ ಇಲ್ಲಿಯ ಇನ್ಸ್ಪಾಯರ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ಆರಂಭವಾದ ರಾಷ್ಟ್ರೀಯ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.

ಹರಿಯಾಣದ ಸುಮಿತ್ 86 ಕೆಜಿ ವಿಭಾಗದ ಬೌಟ್‌ನಲ್ಲಿ ಆಂಧ್ರದ ಹರೀಶ್ ಪ್ರಸಾದುಲಾ ವಿರುದ್ಧ ಜಯಿಸಿದರು. ಹರಿಯಾಣದ ಸುಮಿತ್ 2012ರಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು.

2019ರ ಪ್ರೆಸಿಡೆಂಟ್ಸ್‌ ಕಪ್ ಚಿನ್ನದ ಪದಕ ವಿಜೇತ ನೀರಜ್ ಸ್ವಾಮಿ 48 ಕೆಜಿ ವಿಭಾಗದಲ್ಲಿ 5–0 ಯಿಂದ ಹರಿಯಾಣದ ಸಾಗರ್ ವಿರುದ್ಧ ಜಯಿಸಿದರು.

54 ಕೆಜಿ ವಿಭಾಗದಲ್ಲಿ ಪಂಜಾಬ್‌ನ ರಾಜಪಿಂದರ್ ಸಿಂಗ್ 5–0ಯಿಂದ ರಾಹುಲ್ ನಿಲ್ತು ವಿರುದ್ಧ ಗೆದ್ದರು. 75 ಕೆಜಿ ವಿಭಾಗದಲ್ಲಿ ನಿಖಿಲ್ ದುಬೆ ಗುಜರಾತಿನ ಸೆಜಾದ್ ಲಿಲ್ಗಾರ್ ವಿರುದ್ಧ ಗೆದ್ದರೆ, ಛತ್ತೀಸಗಡದ ದಿನೇಶ್ ಕುಮಾರ್ 3–2ರಿಂದ ಬಂಗಾಳದ ಅಭಿಷೇಕ್ ಶಾ ವಿರುದ್ಧ ಜಯಿಸಿದರು.

ಈ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸುವ ಬಾಕ್ಸರ್‌ಗಳು ಮುಂದಿನ ತಿಂಗಳು ಬೆಲ್‌ಗ್ರೇಡ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ನೇರ ಅರ್ಹತೆ ಗಿಟ್ಟಿಸಲಿದ್ದಾರೆ. ಇದೇ 24ರಂದು ಫೈನಲ್ ಪಂದ್ಯಗಳು ನಡೆಯಲಿವೆ ಎಂದು ಬಾಕ್ಸಿಂಗ್ ಫೆಡರೇಷನ್ ಮೂಲಗಳು ತಿಳಿಸಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT