ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೋಚಕ ಜಯಸಾಧಿಸಿದ ಸ್ಯಾಂಟಿಸಿಮೊಗೆ ಕಿರೀಟ

ಹೆಚ್‌ಪಿಎಸ್‌ಎಲ್‌ ಬೆಂಗಳೂರು ಬೇಸಿಗೆ ಡರ್ಬಿ
ಡಿ. ರವಿಕುಮಾರ್
Published : 25 ಆಗಸ್ಟ್ 2024, 22:30 IST
Last Updated : 25 ಆಗಸ್ಟ್ 2024, 22:30 IST
ಫಾಲೋ ಮಾಡಿ
Comments

ಬೆಂಗಳೂರು: ಭಾನುವಾರ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಸೇರಿದ್ದ ರೇಸ್‌ಪ್ರೇಮಿಗಳ ಎದೆಬಡಿತ ಹೆಚ್ಚಿಸಿದ್ದ  ಪೈಪೋಟಿಯಲ್ಲಿ ಸ್ಯಾಂಟಿಸಿಮೊ ಅಶ್ವವು ಎಚ್‌ಪಿಸಿಎಲ್ ಬೇಸಿಗೆ ಡರ್ಬಿ (ಗ್ರೇಡ್‌ 1)  ಕಿರೀಟವನ್ನು ಗೆದ್ದುಕೊಂಡಿತು.

2000 ಮೀಟರ್ಸ್ ಅಂತರದ ಡರ್ಬಿ ರೇಸ್‌ನಲ್ಲಿ  ಫೆವರಿಟ್ ಆಗಿದ್ದ ಎಕ್ಸಲೆಂಟ್ ಲಾಸ್ ಕುದುರೆಯನ್ನು ಕೊನೆಯ ಹಂತದಲ್ಲಿ ಹಿಂದಿಕ್ಕಿದ ಸ್ಯಾಂಟಿಸಿಮೊ ಕುದುರೆಯ ವೇಗ ಮತ್ತು ಜಾಕಿ ಸಕ್ಲೇನ್ ಅವರ ಕೌಶಲ ರೋಚಕ ರಸದೌತಣ ನೀಡಿತು.  ಸ್ಯಾಂಟಿಸಿಮೊ ಎರಡು ನಿಮಿಷ 03.58 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು.  ಇದರೊಂದಿಗೆ ಸ್ಯಾಂಟಿಸುಮೊ ತನ್ನ ಮಾಲೀಕರಿಗೆ  ₹ 99 ಲಕ್ಷ ಹಾಗೂ  ₹ 1.5 ಲಕ್ಷ ಮೌಲ್ಯದ ಸುಂದರ ಟ್ರೋಫಿಯನ್ನು ಗೆದ್ದುಕೊಟ್ಟಿತು.

ಕಣದಲ್ಲಿ ಹನ್ನೊಂದು ಕುದುರೆಗಳಿದ್ದವು. ಆರಂಭದಲ್ಲಿ ದಿ ಪ್ಯಾಂಥರ್‌ ಮುನ್ನಡೆಯಲ್ಲಿತ್ತು.  ಆದರೆ, 1200 ಮೀಟರ್ಸ್‌ನಲ್ಲಿ ಎಲ್ಫಿನ್‌ ನೈಟ್‌ ಮುನ್ನುಗ್ಗಿ ಲೀಡ್‌ ಪಡೆಯಿತು. ಕೊನೆಯ 500 ಮೀಟರ್ಸ್‌ ವರೆಗೂ ಎಲ್ವಿನ್‌ ನೈಟ್‌ ಹಿಂದೆ ದಿ ಪ್ಯಾಂಥರ್‌, ಎಕ್ಸಲೆಂಟ್‌ ಲಾಸ್‌, ಅಮೇಜಿಂಗ್‌ ರೂಲರ್‌, ಸ್ಯಾಂಟಿಸಿಮೊ, ಪಾಸಿಟಾನೊ ಮತ್ತು ಉಳಿದ ಐದು ಕುದುರೆಗಳು ಓಡುತ್ತಲಿದ್ದವು. 

ಕೊನೆಯ ನೇರ ಓಟದ 400 ಮೀಟರ್ಸ್‌ನಲ್ಲಿ ಎಕ್ಸಲೆಂಟ್‌ ಲಾಸ್‌ ವೇಗವಾಗಿ ಮುನ್ನುಗ್ಗಿ ಲೀಡ್‌ ಪಡೆಯಿತು.  ಅದೇ ಕ್ಷಣದಲ್ಲಿ, ಸ್ಯಾಂಟಿಸಿಮೊ ಸಹ ತನ್ನ ವೇಗ ಹೆಚ್ಚಿಸಿ ಕೊಂಡಿತು.  ಅಲ್ಲಿಂದ ಇವರೆಡು ಕುದುರೆಗಳ ನಡುವೆ ನಡೆದ ತೀವ್ರ ಪೈಪೋಟಿಯು ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು.  ಕೊನೆಗೆ ಎಕ್ಸಲೆಂಟ್‌ ಲಾಸ್‌ ಅಲ್ಪ ಅಂತರದಲ್ಲಿ ಎರಡನೇ ಸ್ಥಾನ ಪಡೆದರು. ಒಂದು ಲೆಂಗ್ತ್‌ ಹಿಂದೆ ಇದ್ದ ಪೊಸಿಟಾನೊ ಮೂರನೇ ಸ್ಥಾನ ಪಡೆಯಿತು.  .

ಗೈನ್ಸ್‌ವಿಲ್‌ ಸ್ಟಡ್‌ ಮತ್ತು ಅಗ್ರಿಕಲ್ಚರಲ್‌ ಫಾರ್ಮ್‌ ಲಿಮಿಟೆಡ್‌ ಮತ್ತು ಇತರರ ಒಡೆತನದ ಸ್ಯಾಂಟಿಸಿಮೊ ಕುದುರೆಗೆ ಪೆಸಿ ಶ್ರಾಫ್‌ ತರಬೇತಿ ನೀಡಿದ್ದಾರೆ. 

ಬುಕ್‌ಮೇಕರ್ಸ್‌ಗಳ ಅನುಪಸ್ಥಿತಿ ಇದ್ದರೂ, ಇಂದಿನ ಡರ್ಬಿ ರೇಸ್‌ ದಿನದಂದು ಸುಮಾರು 7000 ರೇಸ್‌ಪ್ರಿಯರು ಬಿ.ಟಿ.ಸಿ ಆವರಣದಲ್ಲಿ ಉತ್ಸುಕತೆಯಿಂದ ರೇಸ್‌ಗಳನ್ನು ವೀಕ್ಷಿಸಿದರು.  

ಡರ್ಬಿ ರೇಸ್‌ ಫಲಿತಾಂಶ (ಮೊದಲ ನಾಲ್ಕು ಸ್ಥಾನ)

ಸ್ಥಾನ;ಕುದುರೆ ಹೆಸರು;ಹೊತ್ತ ತೂಕ;ಟ್ರೈನರ್‌;ಜಾಕಿ;ಸಮಯ;ಬಹುಮಾನದ ಮೊತ್ತ (₹)

1;ಸ್ಯಾಂಟಿಸಿಮೊ;56;ಪೆಸಿ ಶ್ರಾಫ್‌;ಎಸ್‌.ಸಕ್ಲೈನ್‌;2ನಿ,3.58ಸೆ; ₹ 98,01,000
2;ಎಕ್ಸಲೆಂಟ್‌ ಲಾಸ್‌;54.5;ರಾಜೇಶ್‌ ನರೇಡು;ಸೂರಜ್‌ ನರೇಡು;2:3.76; ₹ 32,67,000
3;ಪೊಸಿಟಾನೊ;56;ಎಸ್‌.ಎಸ್‌. ಅತೋಲಾ ಹಿ;2:3.91;₹ 16,33,500
4;ವಿಕ್ಟರ್‌ ಹುಗೊ;56;ಇರ್ಫಾನ್‌ ಘಟಾಲ;ಎಲ್‌.ಎ.ರೊಜಾರಿಯೊ;2ನಿ,4.56ಸೆ; ₹ 8,16,750

ಚಿತ್ರನಟ ಅಭಿಷೇಕ್ ಅಂಬರೀಶ್ ರೇಸ್‌ ವೀಕ್ಷಿಸಿದರು   
ಚಿತ್ರನಟ ಅಭಿಷೇಕ್ ಅಂಬರೀಶ್ ರೇಸ್‌ ವೀಕ್ಷಿಸಿದರು   
ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಬೇಸಿಗೆ ಡರ್ಬಿ ವೀಕ್ಷಿಸಲು ಸೇರಿದ್ದ ರೇಸ್‌ಪ್ರಿಯರು  
ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಬೇಸಿಗೆ ಡರ್ಬಿ ವೀಕ್ಷಿಸಲು ಸೇರಿದ್ದ ರೇಸ್‌ಪ್ರಿಯರು  
ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಭಾನುವಾರ ನಡೆದ ಬೇಸಿಗೆ ಡರ್ಬಿ (ಗ್ರೇಡ್‌ 1 ) ರೇಸ್‌ನಲ್ಲಿ ಪ್ರಶಸ್ತಿ ಜಯಿಸಿದ ಸ್ಯಾಂಟಿಸಿಮೊ  ಕುದುರೆಯ ಜಾಕಿ ಎಸ್‌. ಸಕ್ಲೇನ್‌ ಅವರಿಗೆ ಎಚ್‌ಪಿಎಸ್‌ಎಲ್ ಸಿ.ಇ.ಒ ಸುರೇಶ್ ಪಾಲಡುಗು ಚೇರ್ಮನ್ ಅರುಣಕುಮಾರ್ ಪಾರಸ್ ಅವರು ಟ್ರೋಫಿ ಪ್ರದಾನ ಮಾಡಿದರು. ಗೇನ್ಸ್‌ವಿಲ್ ಸ್ಟಡ್ ಮತ್ತು ಎಜಿಆರ್‌ಎಲ್ ಫಾರ್ಮ್‌ ಪ್ರೈವೇಟ್ ಲಿಮಿಟೆಡ್‌ ಮಾಲೀಕರಾದ (ಎಡದಿಂದ) ಜಾಯ್‌ದೀಪ್ ದತ್ತಾ ಗುಪ್ತ ಗೌತಮ್ ಪಿ ಲಾಲಾ ಕಿಶೋರ್ ರುಂಗ್ಟಾ ಮತ್ತು  ಅಚ್ಯುತನ್ ಸಿದ್ಧಾರ್ಥ್ ಇದ್ದಾರೆ
ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಭಾನುವಾರ ನಡೆದ ಬೇಸಿಗೆ ಡರ್ಬಿ (ಗ್ರೇಡ್‌ 1 ) ರೇಸ್‌ನಲ್ಲಿ ಪ್ರಶಸ್ತಿ ಜಯಿಸಿದ ಸ್ಯಾಂಟಿಸಿಮೊ  ಕುದುರೆಯ ಜಾಕಿ ಎಸ್‌. ಸಕ್ಲೇನ್‌ ಅವರಿಗೆ ಎಚ್‌ಪಿಎಸ್‌ಎಲ್ ಸಿ.ಇ.ಒ ಸುರೇಶ್ ಪಾಲಡುಗು ಚೇರ್ಮನ್ ಅರುಣಕುಮಾರ್ ಪಾರಸ್ ಅವರು ಟ್ರೋಫಿ ಪ್ರದಾನ ಮಾಡಿದರು. ಗೇನ್ಸ್‌ವಿಲ್ ಸ್ಟಡ್ ಮತ್ತು ಎಜಿಆರ್‌ಎಲ್ ಫಾರ್ಮ್‌ ಪ್ರೈವೇಟ್ ಲಿಮಿಟೆಡ್‌ ಮಾಲೀಕರಾದ (ಎಡದಿಂದ) ಜಾಯ್‌ದೀಪ್ ದತ್ತಾ ಗುಪ್ತ ಗೌತಮ್ ಪಿ ಲಾಲಾ ಕಿಶೋರ್ ರುಂಗ್ಟಾ ಮತ್ತು  ಅಚ್ಯುತನ್ ಸಿದ್ಧಾರ್ಥ್ ಇದ್ದಾರೆ

ಪೆಸಿ ಶ್ರಾಫ್ ಯಶಸ್ಸಿನ ಓಟ ಮುಂಬೈ ಮೂಲದ ಟ್ರೇನರ್ ‍ಪೆಸಿ ಶ್ರಾಫ್ ಅವರಿಗೆ ಇದು ಸತತ ಮೂರನೇ ಬೇಸಿಗೆ ಡರ್ಬಿ ಕಿರೀಟವಾಗಿದೆ.  2022ರಲ್ಲಿ ಝುಕರೇಲಿ ಮತ್ತು ಹೋದ ವರ್ಷ ಜಮಾರಿ ಅಶ್ವಗಳು ಬೇಸಿಗೆ ಡರ್ಬಿ ಜಯಿಸಿದ್ದವು. ಅಲ್ಲದೇ 2022ರ ಚಳಿಗಾಲದ ಡರ್ಬಿಯನ್ನೂ ಪೇಸಿ ಅವರ ಕುದುರೆಯೇ ಜಯಿಸಿತ್ತು.  ‘ಬೆಂಗಳೂರು ನನಗೆ ಅಚ್ಚುಮೆಚ್ಚಿನ ನಗರ. 1980ರ ದಶಕದಿಂದಲೂ ಈ ಊರು ನನಗೆ ತವರುಮನೆಯಂತಾಗಿದೆ. ಇಲ್ಲಿಯ ವಾತಾವರಣ ಅತ್ಯಂತ ಸುಂದರ ಮತ್ತು ಟ್ರ್ಯಾಕ್‌ ಅದ್ಭುತವಾಗಿದೆ. ಅಲ್ಲದೇ ಬಹಳಷ್ಟು ಸ್ನೇಹಿತರ ಬಳಗವು ಇಲ್ಲಿದೆ. ಅವರೆಲ್ಲರೂ ನನ್ನ ಕುಟುಂಬದ ಸದಸ್ಯರಂತಿದ್ದಾರೆ. ಇಲ್ಲಿ ಜಯಿಸುವುದೆಂದರೆ ನನಗೆ ಅಪಾರ ಖುಷಿ’ ಎಂದು 59 ವರ್ಷದ ಪೆಸಿ ಶ್ರಾಫ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.  ‘ಸ್ಯಾಂಟಿಸಿಮೊ ಅಶ್ವದ ವಿಶೇಷವೆಂದರೆ ಅದು ಸ್ಪ್ರಿಂಟರ್. ಉತ್ತಮ ಸಾಮರ್ಥ್ಯವಿರುವ ಅಶ್ವ ಅದು. ನಮ್ಮ ತಂಡದಲ್ಲಿರುವ ಎಲ್ಲರ ಪರಿಶ್ರಮ ನನ್ನ ಪತ್ನಿ (ಟೀನಾ) ಅವರ ನಿರಂತರ ಕಾಳಜಿಯಿಂದಾಗಿ  ಈ ಸಾಧನೆ ಸಾಧ್ಯವಾಗಿದೆ. ಮಗ (ಯೋಹಾನ್) ಕುದುರೆಗಳಿಗೆ ಪೌಷ್ಟಿಕ ಆಹಾರ ನೀಡುವ ಕ್ರಮವೂ ಗೆಲುವಿನಲ್ಲಿ ಪ್ರಮುಖವಾಗಿದೆ.  ಜಾಕಿ ಸಕ್ಲೇನ್ ಅತ್ಯದ್ಭುತ’ ಎಂದು ಶ್ರಾಫ್‌ ಶ್ಲಾಘಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT