ಬೆಂಗಳೂರು: ಅಪೂರ್ವ ಆಟ ಆಡಿದ ಸುರಾನ ಇಂಡಿಪೆಂಡೆಂಟ್ ಕಾಲೇಜು ಬಾಲಕರ ತಂಡದವರು ಅಂತರ ಪದವಿಪೂರ್ವ ಕಾಲೇಜು ವಾಲಿಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಸೌತ್ ಎಂಡ್ ವೃತ್ತದಲ್ಲಿರುವ ಸುರಾನ ಕಾಲೇಜು ತಂಡ ಫೈನಲ್‌ನಲ್ಲಿ 21–25, 25–23, 25–17ರಲ್ಲಿ ಅಗ್ರಗಾಮಿ ಕಾಲೇಜು ತಂಡವನ್ನು ಸೋಲಿಸಿತು.

ಮೊದಲ ಸೆಟ್‌ನಲ್ಲಿ ನಿರಾಸೆ ಕಂಡ ಸುರಾನ ತಂಡದವರು ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಅಮೋಘ ಸಾಮರ್ಥ್ಯ ತೋರಿ ಗೆಲುವಿನ ತೋರಣ ಕಟ್ಟಿದರು.

ಕ್ವಾರ್ಟರ್ ಫೈನಲ್‌ನಲ್ಲಿ 15–25, 25–22, 15–12ರಲ್ಲಿ ಸಿಂಧಿ ಕಾಲೇಜಿನ ಎದುರು ಗೆದ್ದಿದ್ದ ಸುರಾನ ತಂಡ ಸೆಮಿಫೈನಲ್‌ನಲ್ಲಿ 23–25, 25–21, 15–13ರಲ್ಲಿ ಆದಿತ್ಯ ಕಾಲೇಜು ತಂಡವನ್ನು ಪರಾಭವಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.