ನಾಟೆರ್ (ಫ್ರಾನ್ಸ್): ಸ್ಲೊವಾಕಿಯಾದ ಈಜುಗಾರ್ತಿ ತಮಾರಾ ಪೊಟೊಕಾ ಅವರು ಮಹಿಳೆಯರ 200 ಮೀ. ಇಂಡಿವಿಜುವಲ್ ಮೆಡ್ಲೆ ಸ್ಪರ್ಧೆಯ ಅರ್ಹತಾ ಹೀಟ್ ನಂತರ ಶುಕ್ರವಾರ ಈಜುಕೊಳದ ಬಳಿಯಲ್ಲೇ ಕುಸಿದರು. ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಸ್ಟ್ರೆಚರ್‌ನಲ್ಲಿ ಕರೆದೊಯ್ಯಲಾಯಿತು.
21 ವರ್ಷ ವಯಸ್ಸಿನ ಪೊಟೊಕಾ ಅವರು ಆಕ್ಸಿಜನ್ ಮಾಸ್ಕ್ ಧರಿಸಿದ್ದು ಕಂಡುಬಂತು. ಅವರು ಪ್ರಜ್ಞಾವಸ್ಥೆಯಲ್ಲಿದ್ದರು ಎಂದು ಈಜುಕೊಳದ ಬಳಿಯಿದ್ದ ವೈದ್ಯಕೀಯ ಸಿಬ್ಬಂದಿ ತಿಳಿಸಿದರು.
ಸ್ಪರ್ಧೆ ಮುಗಿಸಿ ಕೊಳದಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಅವರು ಕುಸಿದರು. ಅವರನ್ನು ವೈದ್ಯಕೀಯ ಸಿಬ್ಬಂದಿ ಸುತ್ತುವರಿದರು. ಅವರಿಗೆ ಹೃದಯಸ್ಥಂಭನಕ್ಕೆ ನೀಡುವ ಸಿಪಿಆರ್ ಚಿಕಿತ್ಸೆ ನೀಡಲಾಯಿತೇ ಎಂಬುದು ಖಚಿತವಾಗಲಿಲ್ಲ.
ಸ್ಲೊವಾಕಿಯಾ ರಾಜಧಾನಿ ಬ್ರಾಟಿಸ್ಲಾವಾದಲ್ಲಿ ನೆಲೆಸಿರುವ ಅವರಿಗೆ ಮೊದಲ ಒಲಿಂಪಿಕ್ಸ್. ಹೀಟ್‌್ನಲ್ಲಿ ಅವರು 2ನಿ.14.20 ಸೆ.ಗಳಲ್ಲಿ ಗುರಿಮುಟ್ಟಿ ಏಳನೇ ಸ್ಥಾನ ಪಡೆದರು. ಹೀಗಾಗಿ ಸ್ಪರ್ಧೆಯಿಂದ ಹೊರಬಿದ್ದರು.