ಬೆಂಗಳೂರು: ಸಂಜೆಯ ಹೊತ್ತಿಗೆ ಶುರುವಾದ ಸೋನೆಮಳೆಯಲ್ಲಿ ಮೈ ಚಳಿಬಿಟ್ಟು ಈಜಿದ ಕನ್ನಡಿಗ ಶ್ರೀಹರಿ ನಟರಾಜ್, ಗ್ಯಾಲರಿಯಲ್ಲಿ ಕೊಡೆ ಹಿಡಿದು ಕುಳಿತಿದ್ದ ಉದ್ಯಾನ ನಗರಿಯ ಈಜುಪ್ರಿಯರನ್ನು ರೋಮಾಂಚನಗೊಳಿಸಿದರು.

ಮಂಗಳವಾರ ಆರಂಭವಾದ ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಷಿಪ್‌ನ ಪುರುಷರ 50 ಮೀಟರ್ಸ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಶ್ರೀಹರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ನಗರದ ಹೊರವಲಯದ ಬೆಟ್ಟಹಲಸೂರಿನಲ್ಲಿರುವ ಪಡುಕೋಣೆ–ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ಕೇಂದ್ರದಲ್ಲಿ ನಡೆದ ಸ್ಪರ್ಧೆಯಲ್ಲಿ 19ರ ಹರೆಯದ ಶ್ರೀಹರಿ 25.30 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. ಬೆಳಿಗ್ಗೆ ನಡೆದಿದ್ದ 4X100 ಮೀಟರ್ಸ್ ಫ್ರೀಸ್ಟೈಲ್ ರಿಲೆಯಲ್ಲೂ ಶ್ರೀಹರಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಶ್ರೀಹರಿ, ವೀರಧವಳ್ ಖಾಡೆ, ಸಾಜನ್ ಪ್ರಕಾಶ್ ಮತ್ತು ಆನಂದ್ ಅನಿಲ್‌ಕುಮಾರ್ ಅವರಿದ್ದ ಭಾರತ ತಂಡದಿಂದ 3 ನಿಮಿಷ 23.72 ಸೆಕೆಂಡುಗಳ ಸಾಮರ್ಥ್ಯ ಮೂಡಿಬಂತು.

ಕುಶಾಗ್ರ ಮಿಂಚು: 200 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಕುಶಾಗ್ರ ರಾವತ್, ಚಿನ್ನದ ಸಾಧನೆ ಮಾಡಿದರು. ಅವರು 1 ನಿಮಿಷ 52.30 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

ಆರನೇ ಲೇನ್‌ನಿಂದ ಸ್ಪರ್ಧೆ ಆರಂಭಿಸಿದ್ದ ಕುಶಾಗ್ರ, ಮೊದಲ ಎರಡು ಸುತ್ತಿನ ಸ್ಪರ್ಧೆಗಳು (100 ಮೀಟರ್ಸ್) ಮುಗಿದಾಗ ಮೂರನೇ ಸ್ಥಾನದಲ್ಲಿದ್ದರು. ಗುರಿ ಮುಟ್ಟಲು 25 ಮೀಟರ್ಸ್ ಬಾಕಿ ಇದ್ದಾಗ ಥಾಯ್ಲೆಂಡ್‌ನ ಕಿಟ್ಟಿಯಾ ತನಕ್ರಿತ್ ಮತ್ತು ಸಿರಿಯಾದ ಅಬ್ಬಾಸ್ ಓಮರ್ ಅವರನ್ನು ಹಿಂದಿಕ್ಕಿದ ಕುಶಾಗ್ರ, ನಂತರ ಮಿಂಚಿನ ಗತಿಯಲ್ಲಿ ಸಾಗಿದರು. ಅವರು ಗುರಿ ಮುಟ್ಟುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಹರ್ಷೋದ್ಗಾರ ಮೊಳಗಿತು. ಅಭಿಮಾನಿಗಳು ಚಪ್ಪಾಳೆ ತಟ್ಟಿ ಅಭಿನಂದಿಸಿದರು. 800 ಮೀಟರ್ಸ್ ಫ್ರೀಸ್ಟೈಲ್‌ನಲ್ಲೂ ಕುಶಾಗ್ರ ಮೋಡಿ ಮಾಡಿದರು. ದೆಹಲಿಯ 19ರ ಹರೆಯದ ಕುಶಾಗ್ರ 8 ನಿಮಿಷ 10.05 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಕೂಟ ದಾಖಲೆ ಬರೆದರು. 2017ರಲ್ಲಿ ತಾಷ್ಕೆಂಟ್‌ನಲ್ಲಿ ನಡೆದಿದ್ದ ಕೂಟದಲ್ಲಿ ಲ್ಯಾಮ್ ಕ್ವಾಂಗ್ ನಹಟ್ ಚಿನ್ನದ ಪದಕ ಜಯಿಸಿದ್ದರು. ಅವರು 8 ನಿಮಿಷ 13.13 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ದಾಖಲೆ ಬರೆದಿದ್ದರು.

18 ಪದಕ ಗೆದ್ದ ಭಾರತ: ಭಾರತ ತಂಡವು ಮೊದಲ ದಿನ ತಲಾ ಆರು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು. ಜಪಾನ್ ತಂಡವು ಮೊದಲ ಸ್ಥಾನ ಗಳಿಸಿತು. ಈ ದೇಶದವರು ಒಟ್ಟು 20 ಪದಕ ಜಯಿಸಿದರು.

ಮೊದಲ ದಿನ ಪದಕ ಗೆದ್ದ ಭಾರತದ ಸ್ಪರ್ಧಿಗಳು: ಪುರುಷರ ವಿಭಾಗ: 200 ಮೀಟರ್ಸ್ ಫ್ರೀಸ್ಟೈಲ್: ಕುಶಾಗ್ರ ರಾವತ್ (ಕಾಲ: 1 ನಿಮಿಷ 52.30ಸೆ.)–1. ಆನಂದ್ ಅನಿಲ್‌ಕುಮಾರ್ (1:54.19ಸೆ.)–3. 100 ಮೀ.ಬ್ರೆಸ್ಟ್‌ಸ್ಟ್ರೋಕ್: ಎಸ್.ಪಿ.ಲಿಖಿತ್ (1:02.19ಸೆ.)–3. 200 ಮೀ.ವೈಯಕ್ತಿಕ ಮೆಡ್ಲೆ; ಸಾಜನ್ ಪ್ರಕಾಶ್ (2:07.24ಸೆ.)–2. 50 ಮೀ.ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ (25.30ಸೆ.)–1, 800 ಮೀ.ಫ್ರೀಸ್ಟೈಲ್: ಕುಶಾಗ್ರ ರಾವತ್ (8:10.05ಸೆ.)–1, 4X100 ಮೀ.ಫ್ರೀಸ್ಟೈಲ್ ರಿಲೆ; ಭಾರತ (3:23.72ಸೆ.)–1.

ಬಾಲಕರು: ಗುಂಪು–2: 200 ಮೀ.ಫ್ರೀಸ್ಟೈಲ್; ಸೋಹನ್ ಗಂಗೂಲಿ (1:55.18ಸೆ.)–2. 200 ಮೀ. ವೈಯಕ್ತಿಕ ಮೆಡ್ಲೆ; ಸೋಹನ್ ಗಂಗೂಲಿ (2:11.18ಸೆ.)–1, 50 ಮೀ.ಬ್ಯಾಕ್‌ಸ್ಟ್ರೋಕ್: ಸಾಹಿಲ್ ಲಸ್ಕರ್ (28.11ಸೆ.)–2, 4X100 ಮೀ.ಫ್ರೀಸ್ಟೈಲ್ ರಿಲೆ: ಭಾರತ (3:41.49ಸೆ.)–2. ಗುಂಪು–1: 4X100 ಮೀ. ಫ್ರೀಸ್ಟೈಲ್ ರಿಲೆ: ಭಾರತ (3:33.52ಸೆ.)–3.

ಮಹಿಳಾ ವಿಭಾಗ: 200 ಮೀಟರ್ಸ್ ಫ್ರೀಸ್ಟೈಲ್: ಶಿವಾನಿ ಕಟಾರಿಯಾ (2:05.75ಸೆ.)–2. 50 ಮೀ.ಬ್ಯಾಕ್‌ಸ್ಟ್ರೋಕ್: ಮಾನಾ ಪಟೇಲ್ (29.92ಸೆ.)–1, 800 ಮೀ.ಫ್ರೀಸ್ಟೈಲ್; ಶಿವಾನಿ ಕಟಾರಿಯಾ (9:27.62ಸೆ.)–3. 4X100 ಮೀ.ಫ್ರೀಸ್ಟೈಲ್ ರಿಲೆ; ಭಾರತ (4:00.76ಸೆ.)–2.

ಬಾಲಕಿಯರು: ಗುಂಪು–1: ಸುವನ ಭಾಸ್ಕರ್ (30.32ಸೆ.)–3. ಗುಂಪು–2: 50 ಮೀ.ಬ್ಯಾಕ್‌ಸ್ಟ್ರೋಕ್: ರಿಧಿಮಾ ಕುಮಾರ್ (30.64)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.