ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ20 ಕ್ರಿಕೆಟ್: ರೋಹಿತ್, ವಿರಾಟ್‌ ಜತೆ ಅಗರ್ಕರ್‌ ಮಾತುಕತೆ?

Published 2 ಜನವರಿ 2024, 15:59 IST
Last Updated 2 ಜನವರಿ 2024, 15:59 IST
ಅಕ್ಷರ ಗಾತ್ರ

ಕೇಪ್‌ಟೌನ್:  ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಅಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡುವ ಮೊದಲು ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. 

ಇಬ್ಬರೂ ಆಟಗಾರರು ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಉತ್ಸುಕರಾಗಿದ್ದಾರೆ. 2022ರ ನವೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್ ನಂತರ ಈ ಇಬ್ಬರೂ ಭಾರತದ ಪರ ಚುಟುಕು ಮಾದರಿಯಲ್ಲಿ ಆಡಿಲ್ಲ.

ಆಯ್ಕೆ ಸಮಿತಿ ಸದಸ್ಯರಾದ ಶಿವಸುಂದರ್ ದಾಸ್ ಮತ್ತು ಸಲೀಲ್ ಅಂಕೋಲಾ ಇಲ್ಲಿಗೆ ಆಗಮಿಸಿದ್ದಾರೆ. ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಸಮಯದಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಅಗರ್ಕರ್ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ. 

ಅಫ್ಘಾನಿಸ್ತಾನ ವಿರುದ್ಧದ ತಂಡ ಪ್ರಕಟಿಸುವ ಮೊದಲು ಅಗರ್ಕರ್ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಟೆಸ್ಟ್ ಮತ್ತು ಏಕದಿನ ನಾಯಕ ರೋಹಿತ್, ಕೊಹ್ಲಿ ಅವರೊಂದಿಗೆ ಚರ್ಚಿಸಲಿದ್ದಾರೆಂದು ತಿಳಿದುಬಂದಿದೆ.

ವೆಸ್ಟ್ ಇಂಡೀಸ್–ಅಮೆರಿಕ ಜಂಟಿ  ಆತಿಥ್ಯದಲ್ಲಿ  ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ.  ಅದಕ್ಕೂ ಮುನ್ನ ಭಾರತ ಮತ್ತು ಐಪಿಎಲ್ ತಾರೆಗಳು ಸೇರಿದಂತೆ ಸುಮಾರು 30  ಮಂದಿ ಅನುಭವಿ ಆಟಗಾರರನ್ನು ಗಮನಿಸಲಿದ್ದಾರೆ.

ಮೊಹಾಲಿಯಲ್ಲಿ ಜನವರಿ 11ರಿಂದ ಪ್ರಾರಂಭವಾಗುವ ಚುಟುಕು ಸರಣಿಗೆ ಅಗರ್ಕರ್ ಮತ್ತು ಇತರೆ ಸದಸ್ಯರು ರೋಹಿತ್ ಮತ್ತು ಕೊಹ್ಲಿ ಇಬ್ಬರನ್ನೂ ಆಯ್ಕೆ ಮಾಡುತ್ತಾರೆಯೇ ಅಥವಾ ಅವರ ಫಾರ್ಮ್ ಹಾಗೂ ಫಿಟ್‌ನೆಸ್‌ ಅನ್ನು ನೇರವಾಗಿ ಪರಿಶೀಲಿಸುತ್ತಾರೆಯೇ ಎಂದು ನೋಡಬೇಕಾಗಿದೆ.

‘ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಫಿಟ್ ಆಗಿಲ್ಲ. ಅಫ್ಗನ್ ವಿರುದ್ಧದ ಸರಣಿಯ ನಂತರ,  ಐಪಿಎಲ್‌ ಟೂರ್ನಿಯ ಮೊದಲ ತಿಂಗಳ ಆಧಾರದ ಮೇಲೆ ಎಲ್ಲವನ್ನೂ ನಿರ್ಧರಿಸಲಾಗುವುದು’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT