ಬೆಂಗಳೂರು: ಭಾರತದ ಯುವ ಆಟಗಾರ್ತಿ ಅರ್ಚನಾ ಕಾಮತ್ ಅವರು ಗೋವಾದಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಸ್ಟಾರ್ ಕಂಟೆಂಡರ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಶುಕ್ರವಾರ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಬೆಂಗಳೂರಿನ 23 ವರ್ಷದ ಆಟಗಾರ್ತಿ, ವಿಶ್ವದ 134ನೇ ಕ್ರಮಾಂಕದ ಅರ್ಚನಾ 9-11, 11-5, 11-5, 8-11, 11-5ರಿಂದ ವಿಶ್ವದ 53ನೇ ಕ್ರಮಾಂಕದ ಜಿಯೆನಿ ಶಾವೊ (ಪೋರ್ಚುಗಲ್) ಅವರಿಗೆ ಆಘಾತ ನೀಡಿದರು.

ಪುರುಷರ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಮಾನವ್ ಠಕ್ಕರ್ ಮತ್ತು ಮನುಷ್ ಶಾ ಜೋಡಿಯು ನಿರಾಸೆ ಅನುಭವಿಸಿತು. ಈ ಜೋಡಿಯು 7-11, 11-7, 8-11, 9-11ರಿಂದ ಚೀನಾ ತೈಪೆಯ ಕಾವೊ ಚೆಂಗ್-ಜುಯಿ ಮತ್ತು ಚುವಾಂಗ್ ಚಿಹ್ ಯುವಾನ್ ಅವರಿಗೆ ಮಣಿಯಿತು.

ಮಹಿಳೆಯರ ಡಬಲ್ಸ್‌ನಲ್ಲಿ ದಿಯಾ ಚಿತಳೆ ಮತ್ತು ಶ್ರೀಜಾ ಅಕುಲಾ 9-11, 8-11, 8-11ರಿಂದ ಚೀನಾ ತೈಪೆಯ ಚೆಂಗ್ ಐ-ಚಿಂಗ್ ಮತ್ತು ಲಿ ಯು-ಜುನ್ ವಿರುದ್ಧ ಮುಗ್ಗರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.