ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಬಲ್‌ ಟೆನಿಸ್‌: ತನಿಷ್ಕಾಗೆ ಬೆಳ್ಳಿ

Published 10 ಡಿಸೆಂಬರ್ 2023, 16:31 IST
Last Updated 10 ಡಿಸೆಂಬರ್ 2023, 16:31 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ತನಿಷ್ಕಾ ಕಾಲಭೈರವ ಅವರು ಹರಿಯಾಣದ ಪಂಚಕುಲಾದಲ್ಲಿ ನಡೆದ ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯ 13 ವರ್ಷದೊಳಗಿನ ವಿಭಾಗದ ಬಾಲಕಿಯರ ಸಿಂಗಲ್ಸ್‌ನಲ್ಲಿ ಬೆಳ್ಳಿ ಗೆದ್ದರು.

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ತನಿಷ್ಕಾ 9-11, 5-11, 6-11 ರಿಂದ ಪಶ್ಚಿಮ ಬಂಗಾಲದ ಅಂಕೋಲಿಕಾ ಚಕ್ರವರ್ತಿ ಎದುರು ಸೋತು ಎರಡನೇ ಸ್ಥಾನ ಪಡೆದರು.

ಸೆಮಿಫೈನಲ್‌ನಲ್ಲಿ ತನಿಷ್ಕಾ 11-9, 11-6, 11-2 ರಿಂದ ಎನ್‌ಸಿಒಇನ ರಂಜಿನಿ ಸಹಾ ವಿರುದ್ಧ; ಕ್ವಾರ್ಟರ್‌ ಫೈನಲ್‌ನಲ್ಲಿ 11-9, 3-11, 11-7, 11-9 ರಿಂದ ಪಶ್ಚಿಮ ಬಂಗಾಲದ ಅಹೋನಾ ರೇ ವಿರುದ್ಧ ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT