ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

TATA Steel Chess 2024: ಗುಕೇಶ್ ರನ್ನರ್ ಅಪ್‌, ಲಿಯಾನ್‌ಗೆ ಪ್ರಶಸ್ತಿ

Published 29 ಜನವರಿ 2024, 23:30 IST
Last Updated 29 ಜನವರಿ 2024, 23:30 IST
ಅಕ್ಷರ ಗಾತ್ರ

ವಿಯ್ಕ್ ಆನ್‌ ಝೀ (ನೆದರ್ಲೆಂಡ್ಸ್): ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್ ಅವರು ಅಂತಿಮ ಟೈ ಬ್ರೇಕರ್‌ನಲ್ಲಿ ಚೀನಾದ ವಿ ಯಿ ಅವರಿಗೆ ಮಣಿಯುವುದರೊಂದಿಗೆ ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯಲ್ಲಿ ಸೋಮವಾರ ಜಂಟಿ ಎರಡನೇ ಸ್ಥಾನಕ್ಕೆ ಸಮಾಧಾನ ಪಡಬೇಕಾಯಿತು.

ಆದರೆ ಚಾಲೆಂಜರ್ ವಿಭಾಗದಲ್ಲಿ ಭಾರತದ ಲಿಯಾನ್ ಲ್ಯೂಕ್ ಮೆಂಡೋನ್ಸ ಅವರು 13ನೇ ಹಾಗೂ ಅಂತಿಮ ಸುತ್ತಿನಲ್ಲಿ ಸ್ವದೇಶದ ದಿವ್ಯಾ ದೇಶಮುಖ್ ಅವರನ್ನು ಮಣಿಸಿ ಚಾಂಪಿಯನ್ ಆದರು. ಗೋವಾದ ಆಟಗಾರ 9.5 ಪಾಯಿಂಟ್ಸ್‌ ಕಲೆಹಾಕಿದರು.

ಮಾಸ್ಟರ್ಸ್‌ ವಿಭಾಗದಲ್ಲಿ ಗುಕೇಶ್ ಫೈನಲ್‌ಗೆ ಅರ್ಹತೆ ಪಡೆಯಬೇಕಾದರೆ ಕೊನೆಯ ಸುತ್ತಿನಲ್ಲಿ ಇರಾನ್‌ನ ಪರ್ಹಾಮ್ ಮಘಸೂಡ್ಲೂ ಅವರನ್ನು ಸೋಲಿಸಿ, ನಂತರ ಮೂರು ಟೈಬ್ರೇಕ್‌ ಆಟಗಳಲ್ಲಿ ಕಳೆದ ಸಲದ ವಿಜೇತ ಅನಿಶ್ ಗಿರಿ ಅವರನ್ನು ಸೋಲಿಸಬೇಕಾಗಿತ್ತು. ಈ ಎರಡರಲ್ಲಿ ಅವರು ಯಶಸ್ವಿಯೂ ಆಗಿ ಪ್ರಶಸ್ತಿಯ ಭರವಸೆ ಮೂಡಿಸಿದ್ದರು. ಆದರೆ ವಿ ಯಿ ಜೊತೆ ಮೊದಲು ಡ್ರಾ ಮಾಡಿಕೊಂಡ ಗುಕೇಶ್, ನಂತರ ಸೋಲು ಕಂಡರು.

ಕೊನೆಯ (14ನೇ) ಸುತ್ತಿನಲ್ಲಿ ವಿ ಯಿ, ಭಾರತದ ವಿದಿತ್ ಗುಜರಾತಿ (7.5) ವಿರುದ್ಧ ಜಯಗಳಿಸಿದರೆ, ಪ್ರಜ್ಞಾನಂದ (7.5), ಫ್ರಾನ್ಸ್‌ನ ಅಲಿರೇಜಾ ಫಿರೋಜ್ (7.5) ಅವರ ಜೊತೆ ಡ್ರಾ ಮಾಡಿಕೊಂಡರು. ನೆದರ್ಲೆಂಡ್ಸ್‌ನ ಅನಿಶ್ ಗಿರಿ (8.5), ಮ್ಯಾಕ್ಸ್‌ ವಾರ್ಮೆರ್‌ಡನ್ (4) ವಿರುದ್ಧ ಜಯಗಳಿಸಿದರು.

ಅನಿಶ್ ಮೂರನೇ, ಉಜ್ಬೇಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತಾರೋವ್ ನಾಲ್ಕನೇ, ವಿದಿತ್‌ ಗುಜರಾತಿ ಆರನೇ ಹಾಗೂ ಪ್ರಜ್ಞಾನಂದ ಏಳನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT