ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಕ್ವಾರ್ಟರ್‌ಗೆ ರೋಹನ್‌–ಎಬ್ಡೆನ್

ದುಬೈ ಟೆನಿಸ್: ಆರಂಭಿಕ ಸುತ್ತಿನಲ್ಲಿ ನಗಾಲ್‌ ನಿರ್ಗಮನ
Published 28 ಫೆಬ್ರುವರಿ 2024, 22:30 IST
Last Updated 28 ಫೆಬ್ರುವರಿ 2024, 22:30 IST
ಅಕ್ಷರ ಗಾತ್ರ

ದುಬೈ : ಅಗ್ರ ಶ್ರೇಯಾಂಕದ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿಯು ದುಬೈ ಟೆನಿಸ್ ಚಾಂಪಿಯನ್‌ಷಿಪ್‌ನ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಆದರೆ, ಸಿಂಗಲ್ಸ್‌ನಲ್ಲಿ ಭಾರತದ ಅಗ್ರಗಣ್ಯ ಆಟಗಾರ ಸುಮಿತ್‌ ನಗಾಲ್‌ ಆರಂಭಿಕ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.

ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಆಗಿರುವ ಭಾರತದ ರೋಹನ್‌ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಜೋಡಿಯು 16ರ ಘಟ್ಟದ ಪಂದ್ಯದಲ್ಲಿ 7-6(4), 7-6(5) ರಿಂದ ಟುನೀಶಿಯಾದ ಸ್ಕಂದರ್ ಮನ್ಸೌರಿ ಮತ್ತು ಪಾಕಿಸ್ತಾನದ ಐಸಾಮ್-ಉಲ್-ಹಕ್ ಖುರೇಷಿ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿದರು. ಈ ಜೋಡಿಯು ಕ್ವಾರ್ಟರ್‌ ಫೈನಲ್‌ನಲ್ಲಿ ಉರುಗ್ವೆಯ ಏರಿಯಲ್ ಬೆಹರ್ ಮತ್ತು ಜೆಕ್ ಗಣರಾಜ್ಯದ ಆ್ಯಡಂ ಪಾವ್ಲಾಸೆಕ್ ಅವರನ್ನು ಎದುರಿಸಲಿದೆ.

ಭಾರತದ ಯೂಕಿ ಭಾಂಬ್ರಿ ಮತ್ತು ಡಚ್‌ನ ರಾಬಿನ್ ಹಾಸೆ ಜೋಡಿಯೂ ಎಂಟರ ಘಟ್ಟ ಪ್ರವೇಶಿಸಿತು. ಈ ಜೋಡಿ 6-7(6), 6-3, 10-8ರಿಂದ ಕಜಕಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಮತ್ತು ಫ್ರಾನ್ಸ್‌ನ ಆಡ್ರಿಯನ್ ಮನ್ನಾರಿನೊ ಅವರನ್ನು ಹಿಮ್ಮೆಟ್ಟಿಸಿತು.

ನಗಾಲ್‌ಗೆ ಸೋಲು: ‌‌ಸುಮಿತ್‌ ನಗಾಲ್ 32ರ ಘಟ್ಟದ ಪಂದ್ಯದಲ್ಲಿ 4-6, 7-5, 1-6ರಿಂದ ಇಟಲಿಯ ಲೊರೆಂಜೊ ಸೋನೆಗೊ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT