ಥಾಣೆ: ‘ಥಾಣೆ ಮ್ಯಾರಥಾನ್’ನ 21 ಕಿ.ಮೀ. ಓಟ ಮುಗಿಸಿ ಮನೆಗೆ ಹಿಂತಿರುಗಿದ್ದ ವ್ಯಕ್ತಿಯೊಬ್ಬರು ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಇಲ್ಲಿನ ವಸಂತ ವಿಹಾರದ ನಿವಾಸಿ ಬೆನೆ ದೆವಾಸಿ ಮೃತಪಟ್ಟವರು. ಫಿಟ್ನೆಸ್ ಪ್ರಿಯರಾಗಿದ್ದ ಅವರು ಮ್ಯಾರಥಾನ್ಗಳಲ್ಲಿ ನಿಯಮಿತವಾಗಿ ಪಾಲ್ಗೊಳ್ಳುತ್ತಿದ್ದರು. ಭಾನುವಾರ ಓಟ ಮುಗಿಸಿ ಮನೆಗೆ ಹಿಂತಿರುಗಿದ ಮೇಲೆ ಕುಸಿದುಬಿದ್ದಿದ್ದರು. ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಅವರ ಸಂಬಂಧಿಗಳು ಮತ್ತು ಸ್ನೇಹಿತರು ತಿಳಿಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಓಟವು ‘ಮ್ಯಾರಥಾನ್ ಥಾಣೆಯದ್ದು, ಶಕ್ತಿ ತರುಣರದ್ದು’ ಎಂಬ ಘೋಷಣೆ ಹೊಂದಿತ್ತು. ಕೋವಿಡ್ನಿಂದ ನಿಂತುಹೋಗಿದ್ದ ಈ ಓಟ ಐದು ವರ್ಷಗಳ ಬಳಿಕ ನಡೆದಿತ್ತು. ಥಾಣೆ ಮಹಾನಗರ ಪಾಲಿಕೆಯು ಈ ಮ್ಯಾರಥಾನ್ ಓಟವನ್ನು 12 ವಿಭಾಗಗಳಲ್ಲಿ ಆಯೋಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.