ದಿನ ಭವಿಷ್ಯ: ಈ ರಾಶಿಯ ವರ್ತಕರಿಗೆ ಶ್ರಮಕ್ಕೆ ತಕ್ಕ ಫಲ ದೊರಕಲಿದೆ..
Published 10 ಆಗಸ್ಟ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಕೆಲಸವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳಲು ಅನ್ಯರಿಗೆ ಜವಾಬ್ದಾರಿ ಹಂಚಬೇಡಿ. ಕರ್ತವ್ಯದಲ್ಲಿ ಲೋಪ ಬೇಡ.
ವೃಷಭ
ಯಾರದ್ದೋ ಮಾತು ಕೇಳಿ ಸಣ್ಣ ಪುಟ್ಟ ಅನಾರೋಗ್ಯವನ್ನು ನಿವಾರಿಸಿಕೊಳ್ಳಲು ಸ್ವ ಔಷಧಗಳನ್ನು ಮಾಡಿಕೊಳ್ಳಬೇಡಿ. ಸದ್ಗುರುವಿನ ಮಾತುಗಳನ್ನು ಪಾಲಿಸಿದ ದಿನಗಳನ್ನು ಮತ್ತೆ ನೆನೆಯುವಿರಿ.
ಮಿಥುನ
ಮನೆಯ ಪ್ರಶಾಂತತೆ ಕಾಪಾಡಿಕೊಂಡು ಉತ್ತಮ ಕಾರ್ಯಗಳಿಂದ ಅಭಿವೃದ್ಧಿಯ ಪಥದಲ್ಲಿ ಸಾಗಿ. ಇಷ್ಟದ ತಿಂಡಿ ತಿನಿಸುಗಳೊಂದಿಗೆ ದಿನ ಕಳೆಯುವಿರಿ.
ಕರ್ಕಾಟಕ
ಜನವಾಣಿಗೆ ಸ್ಪಂದಿಸುವ ರಾಜಕಾರಣಿಗಳಿಗೆ ಹಿಂಬಾಲಕರ ಬೆಂಬಲ ಹೆಚ್ಚಾಗಿ ಸಿಗಲಿದೆ. ಮೈದುನನ ಸಹಾಯದಿಂದ ತವರು ಮನೆಯ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಬೆಂಕಿಯ ಬಗ್ಗೆ ಜಾಗ್ರತೆಯಿಂದಿರಿ.
ಸಿಂಹ
ವಿಶೇಷ ಸಂಗತಿಗಳನ್ನು ಬೇರೆಯವರಿಗೆ ತಿಳಿಸಿ ಆಶ್ಚರ್ಯ ಪಡುವುದರಲ್ಲಿ ಖುಷಿ ಪಡಿ. ಹೊಸ ವ್ಯವಹಾರವೊಂದರ ಪ್ರಾರಂಭಕ್ಕೆ ಬೇಕಾದ ಮಾಹಿತಿಗಳ ಸಂಗ್ರಹ ನಡೆಯುವುದು.
ಕನ್ಯಾ
ದಿನಸಿ ವರ್ತಕರಿಗೆ ವೃತ್ತಿರಂಗದಲ್ಲಿ ಅಭಿವೃದ್ಧಿಯ ಲಕ್ಷಣಗಳಿವೆ. ನಿವೇಶನ ಖರೀದಿಗೆ ಸ್ಥಳದ ಹುಡುಕಾಟ ನಡೆಸುವವರು ವಾಸ್ತುವಿನ ಬಗ್ಗೆ ಗಮನ ನೀಡಿ. ನಂಬಿಕೆ ದ್ರೋಹದಿಂದ ಲೇವಾದೇವಿ ವ್ಯವಹಾರಕ್ಕೆ ತಡೆ ಉಂಟಾಗಬಹುದು.
ತುಲಾ
ಒಂದೇ ಸಂಸ್ಥೆಯಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದವರಿಗೆ ಬಡ್ತಿ ಸಿಗುವ ಅವಕಾಶವಿದೆ. ಮಕ್ಕಳ ವಿದ್ಯಾಭ್ಯಾಸ ಸಮಾಧಾನ ತರುವುದು. ನಿರಂತರ ಚಟುವಟಿಕೆಯಿಂದ ದೇಹಾಲಸ್ಯವನ್ನು ಹೋಗಲಾಡಿಸಿಕೊಳ್ಳಿ.
ವೃಶ್ಚಿಕ
ಹೊಸದಾಗಿ ಆರಂಭಿಸಿದ ಭೂ ವ್ಯವಹಾರದಲ್ಲಿ ಲಾಭ ದೊರೆತು ಸಂತೋಷ ತರಲಿದೆ. ರೈತಾಪಿ ವರ್ಗದವರು ವೃತ್ತಿ ಬದುಕಿನಲ್ಲಿ ನೆರೆಯವರಿಂದ ಸಹಕಾರ ಕೇಳುವುದು ಅನಿವಾರ್ಯ. ಕ್ರೀಡಾಪಟುಗಳಿಗೆ ಜಯ ಸಿಗುವುದು.
ಧನು
ಇಚ್ಚೆಯಂತೆ ಇರಲು ಬಯಸುವವರು ನಿಯಮವನ್ನು ಅನುಸರಿಸಿ. ಸರ್ಕಾರಿ ಅಧಿಕಾರಿ ವರ್ಗದವರಿಗೆ ಸ್ಥಳ ಬದಲಾವಣೆ ಸಂಭವ ಇರುವುದು. ವರ್ತಕರಿಗೆ ಶ್ರಮಕ್ಕೆ ತಕ್ಕ ಫಲ ದೊರಕಲಿದೆ.
ಮಕರ
ಪ್ರೇಮಿಗಳಿಗೆ ಹಿರಿಯರಿಂದ ಒಪ್ಪಿಗೆ ದೊರೆತು ನಿಟ್ಟುಸಿರು ಬಿಟ್ಟಂತೆ ಆಗುವುದು. ನಿರುದ್ಯೋಗಿಗಳಿಗೆ ಕೆಲಸ ಸಿಗುವ ಲಕ್ಷಣವಿದೆ. ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಗಳು ರಕ್ಷಣೆಯ ಬಗ್ಗೆ ಗಮನವಹಿಸಬೇಕಾಗುವುದು.
ಕುಂಭ
ಆರೋಗ್ಯದಲ್ಲಿನ ವ್ಯತ್ಯಾಸಕ್ಕೆ ನಿದ್ರಾಭಂಗವೇ ಮೂಲ ಕಾರಣವಾಗುವುದು. ಮೃದು ಹಾಗೂ ಸ್ನಿಗ್ಧವಾದ ಮನಸ್ಸನ್ನು ಹೊಂದಿರುವಂಥವರಿಗೆ ನುಡಿಯುವ ಎಲ್ಲಾ ಮಾತುಗಳು ಚುಚ್ಚಿದಂತಾಗುತ್ತದೆ.
ಮೀನ
ಉತ್ತಮ ನೆನಪಿನ ಶಕ್ತಿಯು ಕೆಲಸಗಳಲ್ಲಿ ಅತ್ಯಂತ ಸಹಾಯಕಾರಿ. ಸಂದಿಗ್ಧ ಪರಿಸ್ಥಿತಿಯಲ್ಲಿರುವ ನೀವು ಪರಿಸ್ಥಿತಿಯನ್ನು ಅವಲೋಕಿಸಿ ಇಷ್ಟದೇವರನ್ನು ಪ್ರಾರ್ಥಿಸಿ ತೀರ್ಮಾನ ಕೈಗೊಳ್ಳಿ.