ಶಿಜೊಕಾ, ಜಪಾನ್: ಅದ್ಭುತ ಸಾಮರ್ಥ್ಯ ತೋರಿದ ಡೆನ್ಮಾರ್ಕ್ ಸ್ಪರ್ಧಿಗಳು ಬ್ರಿಟನ್ ಹಾಗೂ ಫ್ರಾನ್ಸ್ ತಂಡಗಳನ್ನು ಹಿಂದಿಕ್ಕಿ ಒಲಿಂಪಿಕ್ಸ್‌ನ ಪುರುಷರ ಮ್ಯಾಡಿಸನ್ ಸೈಕ್ಲಿಂಗ್ ವಿಭಾಗದ ಚಿನ್ನ ಮುಡಿಗೇರಿಸಿಕೊಂಡರು.

ಇಲ್ಲಿ ಇಜು ವೆಲೊಡ್ರೋಮ್ ಟ್ರ್ಯಾಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ನ ಮೈಕೆಲ್ ಮಾರ್ಕೊವ್ ಮತ್ತು ಲಾಸ್ಸೆ ನಾರ್ಮನ್ ಹನ್ಸೆನ್ (ಒಟ್ಟು 43 ಪಾಯಿಂಟ್ಸ್) ಪಾರಮ್ಯ ಮೆರೆದರು. ಮೂರು ಪಾಯಿಂಟ್‌ಗಳ ಅಂತರದಿಂದ ಬ್ರಿಟನ್‌ನ ಎಥನ್ ಹೈಟರ್ ಮತ್ತು ಮ್ಯಾಥ್ಯೂ ವಾಲ್ಸ್ ಅವರನ್ನು ಪರಾಭವಗೊಳಿಸಿದರು.

ಕಂಚಿನ ಪದಕವು ಫ್ರಾನ್ಸ್ ಜೋಡಿ ಬೆಂಜಮಿನ್ ಥಾಮಸ್ ಮತ್ತು ಡೊನಾವನ್ ಗ್ರೊಂಡಿನ್ ಅವರ ಪಾಲಾಯಿತು. ಬ್ರಿಟನ್ ಹಾಗೂ ಫ್ರೆಂಚ್ ಜೋಡಿ ತಲಾ 40 ಪಾಯಿಂಟ್ಸ್ ಕಲೆಹಾಕಿತು. ಆದರೆ ಕೊನೆಯ ಸ್ಪ್ರಿಂಟ್‌ನಲ್ಲಿ ಗೆಲುವು ಸಾಧಿಸಿದ ಕಾರಣ ಬ್ರಿಟನ್ ಸೈಕ್ಲಿಸ್ಟ್‌ಗಳು ಎರಡನೇ ಸ್ಥಾನ ಗಳಿಸಿದರು.

Tokyo Olympics: ಭಾರತಕ್ಕೆ ಮತ್ತೊಂದು ಪದಕ; ಕಂಚು ಗೆದ್ದ ಕುಸ್ತಿಪಟು ಬಜರಂಗ್

ಇಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ ಹನ್ಸೆನ್ ಅವರು ಐದು ಒಲಿಂಪಿಕ್ಸ್ ಪದಕಗಳನ್ನು ಗೆದ್ದ ಡೆನ್ಮಾರ್ಕ್‌ನ ನಾಲ್ಕನೇ ಅಥ್ಲೀಟ್ ಎನಿಸಿಕೊಂಡರು.

ಫಲಿತಾಂಶ

ತಂಡ;ಪಾಯಿಂಟ್ಸ್

ಡೆನ್ಮಾರ್ಕ್;43

ಬ್ರಿಟನ್;40

ಫ್ರಾನ್ಸ್;40

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.