ಟೋಕಿಯೊ: ಮಹಿಳಾ ಹಾಕಿಯಲ್ಲಿ ಭಾರತ ತಂಡ ಜಯದ ಆರಂಭ ಪಡೆಯಲು ವಿಫಲವಾಯಿತು.

‘ಎ’ ಗುಂಪಿನ ಹಣಾಹಣಿಯಲ್ಲಿ 1–5 ಗೋಲುಗಳಿಂದ ನೆದರ್ಲೆಂಡ್ಸ್ಗೆ ಶರಣಾಯಿತು.

ಮೊದಲ ಎರಡು ಕ್ವಾರ್ಟರ್ಗಳಲ್ಲಿ ದಿಟ್ಟ ಸಾಮರ್ಥ್ಯ ತೋರಿದ ರಾಣಿ ರಾಂಪಾಲ್ ಬಳಗ ದ್ವಿತೀಯಾರ್ಧದಲ್ಲಿ ಸಂಪೂರ್ಣವಾಗಿ ಮಂಕಾಯಿತು.

ಮೂರು ಬಾರಿಯ ಚಾಂಪಿಯನ್ ಹಾಗೂ ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ನೆದರ್ಲೆಂಡ್ಸ್ 6ನೇ ನಿಮಿಷದಲ್ಲಿ ಖಾತೆ ತೆರೆಯಿತು. ಫೆಲಿಸ್ ಅಲ್ಬರ್ಸ್ ಗೋಲು ಬಾರಿಸಿದರು. ಇದರ ಬೆನ್ನಲ್ಲೇ (10ನೇ ನಿಮಿಷ) ಕೈಚಳಕ ತೋರಿದ ರಾಣಿ ರಾಂಪಾಲ್ ಸಮಬಲಕ್ಕೆ ಕಾರಣರಾದರು. ಎರಡನೇ ಕ್ವಾರ್ಟರ್ನಲ್ಲಿ ಯಾವ ತಂಡಕ್ಕೂ ಗೋಲು ದಕ್ಕಲಿಲ್ಲ. ಭಾರತದ ಗೋಲ್ಕೀಪರ್ ಸವಿತಾ ಪುನಿಯಾ ಎದುರಾಳಿಗಳ ಪ್ರಯತ್ನಗಳನ್ನು ವಿಫಲಗೊಳಿಸಿ ಎಲ್ಲರ ಗಮನ ಸೆಳೆದರು.

ವಿರಾಮದ ಬಳಿಕ ನೆದರ್ಲೆಂಡ್ಸ್ ಆಟಗಾರ್ತಿಯರು ಪ್ರಾಬಲ್ಯ ಮೆರೆದರು. ಮಾರ್ಗಟ್ ವಾನ್ ಗೆಫೆನ್ (33), ಫೆಲಿಸ್ ಅಲ್ಬರ್ಸ್ (43), ಫ್ರೆಡೆರಿಕ್ ಮಟ್ಲಾ (45) ಹಾಗೂ ಸಿಯಾ ಜಾಕ್ವೆಲಿನ್ ವಾನ್ ಮಾಸಕ್ಕರ್ (52) ಭಾರತದ ರಕ್ಷಣಾ ಕೋಟೆಯನ್ನು ಧ್ವಂಸಗೊಳಿಸಿದರು. ಪಂದ್ಯದಲ್ಲಿ ಈ ತಂಡ ಆರು ಪೆನಾಲ್ಟಿ ಕಾರ್ನರ್ಗಳನ್ನು ಗಳಿಸಿತ್ತು. ಇದು ನೆದರ್ಲೆಂಡ್ಸ್ ತಂಡದ ಆಕ್ರಮಣಕಾರಿ ಆಟಕ್ಕೆ ಸಾಕ್ಷಿ.

ವಿಶ್ವ ರ್ಯಾಂಕಿಂಗ್

ಭಾರತ: 10

ನೆದರ್ಲೆಂಡ್ಸ್: 1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.