ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ನೀರಜ್ ಚೋಪ್ರಾ ಅವರಿಗೆ ತಮ್ಮ ಕಂಪನಿಯ ಎಸ್ಯುವಿ ಎಕ್ಸ್ಯುವಿ 700 ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಭರವಸೆ ನೀಡಿದ್ದಾರೆ.

ಟ್ವಿಟರ್ನಲ್ಲಿ ಆನಂದ್ ಮಹೀಂದ್ರಾ ಫಾಲೋವರ್ಗಳು ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದಿರುವ ಚೋಪ್ರಾಗೆ XUV 700 ಅನ್ನು ಉಡುಗೊರೆಯಾಗಿ ನೀಡುವಂತೆ ಕೇಳಿದಾಗ, ಮಹೀಂದ್ರಾ, ‘ಹೌದು ನಿಜ. ನಮ್ಮ ಬಂಗಾರದ ಕ್ರೀಡಾಪಟುವಿಗೆ XUV700 ಉಡುಗೊರೆಯಾಗಿ ನೀಡುವುದು ನನಗೆ ಅತ್ಯಂತ ಗೌರವದ ವಿಷಯ’ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕೂಡಲೇ ಆ ಟ್ವೀಟ್ ಅನ್ನು ಎಂ & ಎಂ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ಮತ್ತು ಎಂ & ಎಂ ಲಿಮಿಟೆಡ್ ಸಿಇಒ, ಆಟೋಮೋಟಿವ್ ವಿಭಾಗದ ವಿಜಯ್ ನಕ್ರಾ ಅವರಿಗೆ ಟ್ಯಾಗ್ ಮಾಡಿ, ನೀರಜ್ ಚೋಪ್ರಾ ಅವರಿಗಾಗಿ ‘ದಯವಿಟ್ಟು ಒಂದು ಕಾರನ್ನು ಸಿದ್ಧಮಾಡಿ ಇಡಿ’ ಎಂದು ಕೇಳಿದ್ದಾರೆ.

ಇದೇವೇಳೆ, ಮತ್ತೊಬ್ಬ ಫಾಲೋವರ್, ಬೇರೆ ಯಾವುದೇ ಕಾರಲ್ಲ. ನಿಮ್ಮ ಕಂಪನಿಯ ಮುಂಬರುವ XUV700 ಬ್ರಾಂಡ್ನ ಮೊದಲ ಕಾರು ನೀಡಿ ಎಂದು ಕೇಳಿದಾಗ ಮಹೀಂದ್ರಾ ಅವರು, ‘ನಾವು ನಿಮ್ಮ ಮಾತನ್ನು ಆಲಿಸಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಜಾವೆಲಿನ್ ಎಸೆಯುವ ಚಿಹ್ನೆಯನ್ನು ಹೊಂದಿರುವ ಒಂದು ನಾಣ್ಯವನ್ನು ಹಂಚಿಕೊಂಡಿರುವ ಇನ್ನೊಂದು ಟ್ವೀಟ್ನಲ್ಲಿ, ‘ಜಾವೆಲಿನ್ ಥ್ರೋ ನಿಸ್ಸಂದೇಹವಾಗಿ ಸ್ಮರಣಾರ್ಥ ನಾಣ್ಯಗಳಿಗೆ ಹೆಚ್ಚಾಗಿ ಬಳಸುವ ಚಿತ್ರವಾಗಿದೆ. ನಾವು #NeerajChopra ಚಿತ್ರವಿರುವ ಅಧಿಕೃತ ನಾಣ್ಯವೊಂದನ್ನು ಬಿಡುಗಡೆ ಮಾಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಟ್ಯಾಗ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.