ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಪ್ಯಾರಾಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಪುರುಷರ ವೈಯಕ್ತಿಕ ವಿಭಾಗಗಳಲ್ಲಿ ಪ್ರಮೋದ್ ಭಗತ್ ಹಾಗೂ ಸುಹಾಸ್ ಯತಿರಾಜ್ ಬೆನ್ನಲ್ಲೇ ಕೃಷ್ಣಾ ನಗರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಇದರೊಂದಿಗೆ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವೈಯಕ್ತಿಕ ವಿಭಾಗಗಳಲ್ಲಿ ಭಾರತದ ಮೂವರು ಪಟುಗಳು ಫೈನಲ್‌ಗೆ ಪ್ರವೇಶಿಸುವ ಮೂಲಕ ಚಿನ್ನದ ಪದಕ ಗೆಲ್ಲುವ ಗುರಿಯನ್ನಿರಿಸಿದ್ದಾರೆ.

ಇದನ್ನೂ ಓದಿ:Paralympics: ನೋಯ್ಡಾ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಫೈನಲ್‌ಗೆ ಲಗ್ಗೆ

ಪುರುಷರ ಸಿಂಗಲ್ಸ್ ಎಸ್‌ಎಚ್6 ವಿಭಾಗದಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕೃಷ್ಣಾ ನಗರ್, ಎದುರಾಳಿ ಗ್ರೇಟ್ ಬ್ರಿಟನ್‌ನ ಕ್ರಿಸ್ಟನ್ ಕೂಂಬ್ಸ್ ವಿರುದ್ಧ 21-10, 21-11ರ ಅಂತರದಲ್ಲಿ ಗೆಲುವು ದಾಖಲಿಸಿದರು.

ಎರಡನೇ ಶ್ರೇಯಾಂಕಿತರಾಗಿರುವ ಕೃಷ್ಣಾ, ಕೇವಲ 26 ನಿಮಿಷಗಳಲ್ಲಿ ಪಂದ್ಯ ವಶಪಡಿಸಿಕೊಂಡರು.

ಇದನ್ನೂ ಓದಿ:Paralympics: ಶೂಟಿಂಗ್ನಲ್ಲಿ ಮನೀಶ್ಗೆ ಚಿನ್ನ, ಸಿಂಗರಾಜ್ಗೆ ಬೆಳ್ಳಿ

ಈ ಮೊದಲು ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್3 ವಿಭಾಗದಲ್ಲಿ ಪ್ರಮೋದ್ ಭಗತ್ ಮತ್ತು ಎಸ್‌ಎಲ್4 ವಿಭಾಗದಲ್ಲಿ ಸುಹಾಸ್ ಎಲ್. ಯತಿರಾಜ್ ಸಹ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಏತನ್ಮಧ್ಯೆ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿರುವ ಮನೋಜ್ ಸರ್ಕಾರ್ ಮತ್ತು ತರುಣ್ ದಿಲ್ಲೋನ್ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.