ಸ್ಪೇನ್: ಇಲ್ಲಿ ನಡೆಯುತ್ತಿರುವ 20 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಮಹಿಳಾ ಸ್ಪರ್ಧಿಗಳು ಪ್ರಾಬಲ್ಯ ಮೆರೆದಿದ್ದಾರೆ.
ಮಹಿಳೆಯರ 62 ಕೆ.ಜಿ ವಿಭಾಗದಲ್ಲಿ ನಿಕಿತಾ ಬೆಳ್ಳಿ ಪದಕ ಮತ್ತು ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ನೇಹಾ ಕಂಚಿನ ಪದಕ ಗೆದ್ದಿದ್ದಾರೆ.
ಇದರೊಂದಿಗೆ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ಭಾರತ ಎರಡನೇ ಸ್ಥಾನ ಗಳಿಸಿದೆ.
ನಿಕಿತಾ ಅವರು ಫೈನಲ್‌ನಲ್ಲಿ ಉಕ್ರೇನ್‌ನ ಐರಿನಾ ಬೊಂಡಾರ್ ವಿರುದ್ಧ 1-4ರ ಅಂತರದಲ್ಲಿ ಪರಾಭವಗೊಂಡರು.
ಕಳೆದ ವರ್ಷ ನಡೆದಿದ್ದ ಅಂಡರ್-20 ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ನಿಕಿತಾ ಚಿನ್ನದ ಪದಕ ಜಯಿಸಿದ್ದರು.
ಮತ್ತೊಂದೆಡೆ ಹಂಗೇರಿಯ ಗೆರ್ಡಾ ತೆರೆಜ್ ಅವರನ್ನು 10-8ರ ಕಠಿಣ ಅಂತರದಿಂದ ಮಣಿಸಿದ ನೇಹಾ ಕಂಚಿನ ಪದಕ ಜಯಿಸಿದರು.