ಸಾರ್ಬ್ರುಕೆನ್ (ಜರ್ಮನಿ): ಭಾರತದ ಉದಯೋನ್ಮುಖ ಆಟಗಾರ್ತಿ ಉನ್ನತಿ ಹೂಡಾ ಅವರು ಹೈಲೊ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನಲ್ಲಿ ನಾಲ್ಕನೇ ಶ್ರೇಯಾಂಕದ ಹ್ಸಿಯಾಂಗ್ ಟಿ ಲಿನ್ ಅವರಿಗೆ ಆಘಾತ ನೀಡಿ ಸೆಮಿಫೈನಲ್ ಪ್ರವೇಶಿಸಿದರು.

ವಿಶ್ವ ಕ್ರಮಾಂಕದಲ್ಲಿ 34ನೇ ಸ್ಥಾನದಲ್ಲಿರುವ 18ನೇ ವರ್ಷದ ಹೂಡಾ ಕ್ವಾರ್ಟರ್ ಫೈನಲ್ನಲ್ಲಿ 22-20, 21-13ರಿಂದ ತೈವಾನ್ನ ಆಟಗಾರ್ತಿಯನ್ನು ಹಿಮ್ಮೆಟ್ಟಿಸಿದರು. ಈ ಮೂಲಕ ಭಾರತ ಆಟಗಾರ್ತಿಯು ಮೇ ತಿಂಗಳಲ್ಲಿ ಮಲೇಷ್ಯಾ ಮಾಸ್ಟರ್ಸ್ನಲ್ಲಿ ಹ್ಸಿಯಾಂಗ್ ವಿರುದ್ಧದ ಸೋಲಿಗೆ ಇಲ್ಲಿ ಸೇಡು ತೀರಿಸಿಕೊಂಡರು.

ಪುರುಷರ ಸಿಂಗಲ್ಸ್ನಲ್ಲಿ ಅನುಭವಿಗಳಾದ ಲಕ್ಷ್ಯ ಸೇನ್ ಮತ್ತು ಆಯುಷ್ ಶೆಟ್ಟಿ ಕಾರ್ಟರ್ ಫೈನಲ್ನಲ್ಲಿ ಅಭಿಯಾನ ಮುಗಿಸಿದರು. ಸೇನ್ 17-21, 21-14, 15-21ರಿಂದ ನಾಲ್ಕನೇ ಶ್ರೇಯಾಂಕದ ಅಲೆಕ್ಸ್ ಲ್ಯಾನಿಯರ್ (ಫ್ರಾನ್ಸ್) ವಿರುದ್ಧ; ಆಯುಷ್ 21-19, 12-21, 20-22ರಿಂದ ಫಿನ್ಲೆಂಡ್ನ ಕಲ್ಲೆ ಕೊಲ್ಜೊನೆನ್ ವಿರುದ್ಧ ಸೋಲುಂಡರು.