ಚಂಡೀಗಢ: ಭಾರತದ ಮಾಜಿ ಲಾಂಗ್ಜಂಪ್ ತಾರೆ ಅಂಜು ಬಾಬಿ ಜಾರ್ಜ್ ಅವರು ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾದ ಒಂಬತ್ತು ಸದಸ್ಯರ ಅಥ್ಲೀಟ್ಸ್ ಕಮಿಷನ್ ಮುಖ್ಯಸ್ಥರಾಗಿದ್ದಾರೆ. ಅವರೂ ಸೇರಿ ಮೊದಲ ಬಾರಿ ಆರು ಮಂದಿ ಮಹಿಳೆಯರು ಇದರಲ್ಲಿ ಕಮಿಷನ್ನಲ್ಲಿ ಸ್ಥಾನ ಪಡೆದಿದ್ದಾರೆ.

ಜಾವೆಲಿನ್ ದಿಗ್ಗಜ ಹಾಗೂ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಸೇರಿ ಮೂವರು ಪುರುಷ ಕ್ರೀಡಾಪಟುಗಳು ಇದರಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಕಮಿಷನ್ಗೆ ನಾಮನಿರ್ದೇಶನ ನಾಲ್ವರಲ್ಲಿ ಒಳಗೊಂಡಿದ್ದಾರೆ. 3000 ಮೀ. ಸ್ಟೀಪಲ್ಚೇಸರ್ ಅನಿನಾಶ್ ಸಾಬ್ಳೆ ಮತ್ತು ನೂತನ ಅಧ್ಯಕ್ಷ ಬಹಾದೂರ್ ಸಾಗೂ ಇತರ ಇಬ್ಬರು.

2003ರ ವಿಶ್ವ ಚಾಂಪಿಯನ್ಷಿಪ್ನ ಕಂಚಿನ ಪದಕ ವಿಜೇತೆ ಅಂಜು ಬಾಬಿ ಎಎಫ್ಐ ಹಿರಿಯ ಉಪಾಧ್ಯಕ್ಷೆಯಾಗಿದ್ದಾರೆ. ಓಟಗಾರ್ತಿ ಜ್ಯೋತಿರ್ಮಯಿ ಸಿಕ್ದರ್, ಡಿಸ್ಕಸ್ ಥ್ರೋ ಪಟು ಕೃಷ್ಣಾ ಪೂನಿಯಾ, ಹರ್ಡಲ್ಸ್ ಓಟಗಾರ್ತಿ ಎಂ.ಡಿ.ವಲ್ಸಮ್ಮ, ಸ್ಟೀಪಲ್ ಚೇಸರ್ ಸುಧಾ ಸಿಂಗ್, ದೂರ ಅಂತರದ ಓಟಗಾರ್ತಿ ಸುನೀತಾ ರಾಣಿ ಅಥ್ಲೀಟ್ಸ್ ಕಮಿಷನ್ನಲ್ಲಿ ಇರುವ ಇತರ ಮಹಿಳೆಯರು.

ಈ ಹಿಂದಿನ ಕಮಿಷನ್ನಲ್ಲಿ ನಾಲ್ವರು ಮಹಿಳೆಯರಿದ್ದರು.

ಕಮಿಷನ್ನಲ್ಲಿ ಸದಸ್ಯರಾಗಲು ನೀರಜ್ ಮತ್ತು ಸಾಬ್ಳೆ ಆರಂಭದಲ್ಲಿ ಹಿಂಜರಿದಿದ್ದರು. ತಾವು ಸಕ್ರಿಯ ಅಥ್ಲೀಟುಗಳಾಗಿದ್ದು, ಇದಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗದು ಎಂದಿದ್ದರು. ಆದರೆ ಅಂತಿಮವಾಗಿ ಒಪ್ಪಿಕೊಂಡರು.

ಸುಮರಿವಾಲಾ ಪದನಿಮಿತ್ತ ಸದಸ್ಯ:

ಫೆಡರೇಷನ್ನ ನಿರ್ಗಮಿತ ಅಧ್ಯಕ್ಷ ಅದಿಲ್ ಸುಮರಿವಾಲಾ ಅವರು ಪದನಿಮಿತ್ತ ಸದಸ್ಯರಾಗಿ ಕಾರ್ಯಕಾರಿ ಸಮಿತಿಯಲ್ಲಿ ಮುಂದುವರಿಯಲಿದ್ದಾರೆ. ಈ ಹಿಂದಿನ ಮೂರು ಅವಧಿಗೆ ಸದಸ್ಯರಾಗಿದ್ದ 67 ವರ್ಷದ ಅದಿಲ್ ವಿಶ್ವ ಅಥ್ಲೆಟಿಕ್ಸ್ ಕೌನ್ಸಿಲ್ನ ಭಾಗವಾಗಿದ್ದಾರೆ. ಅವರು ವಿಶ್ವ ಅಥ್ಲೆಟಿಕ್ಸ್ನ ಕಾರ್ಯಕಾರಿ ಮಂಡಳಿ ಹಾಲಿ ಸದಸ್ಯರಾಗಿದ್ದಾರೆ.

ಸುಮಾರಿ ವಾಲಾ ಅವರು ಸಮಿತಿ ಅಧ್ಯಕ್ಷರೂ ಆಗಿರಲಿದ್ದು, ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಎಂದು ಬಹಾದೂರ್ ಸಾಗೂ ಬುಧವಾರ ಪ್ರಕಟಿಸಿದರು. ಅವರು ಎಎಫ್ಐನ ಎಥಿಕ್ಸ್ ಕಮಿನಷನ್ ಸದಸ್ಯರೂ ಆಗಿರಲಿದ್ದಾರೆ.

ದೇಶೀಯ ವೇಳಾಪಟ್ಟಿ

ಭಾರತದ ಮೊದಲ ಪ್ರಮುಖ ದೇಶೀಯ ಸೀನಿಯರ್ ಚಾಂಪಿಯನ್ಷಿಪ್ ಆಗಿ ಫೆಡರೇಷನ್ ಕಪ್ ಏಪ್ರಿಲ್ 21 ರಿಂದ 24ರವರೆಗೆ ಕೇರಳದ ಕೋಯಿಕ್ಕೋಡ್ನಲ್ಲಿ ನಡೆಯಲಿದೆ.

ಈ ಹಿಂದೆ ಈ ಕೂಟ ಹರಿಯಾಣದ ಪಂಚಕುಲಾದಲ್ಲಿ ನಿಗದಿಯಾಗಿತ್ತು. ಆದರೆ ಕಳೆದ ವರ್ಷ ಜೂನ್ನಲ್ಲಿ ರಾಷ್ಟ್ರೀಯ ಅಂತರ ರಾಜ್ಯ ಚಾಂಪಿಯನ್ಷಿಪ್ ನಡೆದ ಕಾರಣ ಅಲ್ಲಿನ ಸರ್ಕಾರ ಫೆಡರೇಷನ್ ಕಪ್ ನಡೆಸಲು ಅಸಹಾಯಕತೆ ವ್ಯಕ್ತಪಡಿಸಿತು.

ಈ ಸಾಲಿನ ರಾಷ್ಟ್ರೀಯ ಅಂತರ ರಾಜ್ಯ ಸೀನಿಯರ್ ಚಾಂಪಿಯನ್ಷಿಪ್ ಆಗಸ್ಟ್ 20 ರಿಂದ 24ರವರೆಗೆ ಚೆನ್ನೈನಲ್ಲಿ ನಡೆಯಲಿದೆ. ಪುಣೆ ಅಥವಾ ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ರಾಷ್ಟ್ರೀಯ ಓಪನ್ ಚಾಂಪಿಯನ್ಷಿಪ್ ಇದೀಗ ರಾಂಚಿಯಲ್ಲಿ ಸೆ. 27 ರಿಂದ 30ವವರೆಗೆ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.