ನವದೆಹಲಿ: ಭಾರತದ ವಿಜೇಂದರ್ ಸಿಂಗ್ ಅವರು ಜುಲೈ 13ರಂದು ನ್ಯೂಜೆರ್ಸಿಯಲ್ಲಿ ನಡೆಯುವ ಅಮೆರಿಕ ವೃತ್ತಿಪರ ಬಾಕ್ಸಿಂಗ್ ಪಂದ್ಯದಲ್ಲಿ ಸ್ಥಳೀಯ ಬಾಕ್ಸರ್ ಮೈಕ್ ಸ್ನಿಡರ್ ಸವಾಲು ಎದುರಿಸಲಿದ್ದಾರೆ.

33 ವರ್ಷದ ವಿಜೇಂದರ್, ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸೋಲರಿಯದ ಸರದಾರನಾಗಿ ಮೆರೆಯುತ್ತಿದ್ದಾರೆ. ಆಡಿರುವ 10 ಪಂದ್ಯಗಳನ್ನೂ ಗೆದ್ದಿದ್ದಾರೆ. ಅವರು ಅಮೆರಿಕದಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.

‘ಜುಲೈ 13ರಂದು ಪ್ರುಡೆನ್ಸಿಯಲ್ ಸೆಂಟರ್‌ನಲ್ಲಿ ನಡೆಯುವ ಹಣಾಹಣಿಯಲ್ಲಿ ವಿಜೇಂದರ್ ಮತ್ತು ಮೈಕ್ ಮುಖಾಮುಖಿಯಾಗಲಿದ್ದಾರೆ. ಎಂಟು ಸುತ್ತುಗಳ ಹೋರಾಟ ಇದಾಗಿದೆ’ ಎಂದು ಐಒಎಸ್ ಬಾಕ್ಸಿಂಗ್ ಪ್ರೊಮೋಷನ್ಸ್ ತಿಳಿಸಿದೆ.

ಗಾಯದ ಕಾರಣ ವಿಜೇಂದರ್, ಸುಮಾರು ಒಂದೂವರೆ ವರ್ಷ ಬಾಕ್ಸಿಂಗ್ ರಿಂಗ್‌ನಿಂದ ದೂರ ಉಳಿದಿದ್ದರು. 2017ರಲ್ಲಿ ಜೈಪುರದಲ್ಲಿ ಅವರು ಕೊನೆಯ ಪಂದ್ಯ ಆಡಿದ್ದರು. ಆ ಹಣಾಹಣಿಯಲ್ಲಿ ಘಾನಾದ ಅರ್ನೆಸ್ಟ್ ಅಮುಜು ಅವರನ್ನು ಸೋಲಿಸಿದ್ದರು.

ಸ್ನಿಡರ್ ಅವರು ಈ ವರ್ಷದ ಫೆಬ್ರುವರಿಯಲ್ಲಿ ಚಿಕಾಗೊದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಮಿ ಹ್ಯೂಸ್ ಎದುರು ಸ್ಪರ್ಧಿಸಿ ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.