ಮೈಸೂರು: ದಸರಾ ಉತ್ಸವದ ಆರಂಭಕ್ಕೂ ಮುನ್ನ ನಗರದಲ್ಲಿ ವಿಂಟೇಜ್ ಕಾರುಗಳ ರ್ಯಾಲಿ ಆಯೋಜಿಸಲಾಗಿದೆ. ಸೆಪ್ಟೆಂಬರ್ 30ರಂದು ನಡೆಯಲಿರುವ ರ್ಯಾಲಿಯಲ್ಲಿ ಹಳೆಯ ಕಾರುಗಳು ತಮ್ಮ ಶಕ್ತಿ ಹಾಗೂ ಸೌಂದರ್ಯ ಪ್ರದರ್ಶಿಸಲಿವೆ.

ಶುಕ್ರವಾರ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡ ‘ಐತಿಹಾಸಿಕ ಕಾರುಗಳ ಒಕ್ಕೂಟ’ದ ಅಧ್ಯಕ್ಷ ಡಾ.ರವಿಪ್ರಕಾಶ್ ಅವರು ಈ ಮಾಹಿತಿ ನೀಡಿದರು.

1928 ನೇ ಇಸವಿಯಿಂದ 1975ರ ವರೆಗಿನ ಅವಧಿಯ ಸುಮಾರು 50 ಕಾರುಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಲಿವೆ. ವಿದೇಶದ ಕಾರುಗಳ ಜತೆಗೆ ದೇಶದ ವಿವಿಧ ಭಾಗಗಳ 22 ಹಾಗೂ ಕರ್ನಾಟಕದ 16 ಕಾರುಗಳು ಭಾಗವಹಿಸಲಿವೆ ಎಂದು ಹೇಳಿದರು.

ವಿಂಟೇಜ್ ಕಾರುಗಳು ಸೆ.30 ರಂದು ಬೆಂಗಳೂರಿನಿಂದ ಹೊರಟು ಮೈಸೂರಿಗೆ ಬರಲಿವೆ. ಆ ದಿನ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿವೆ. ಸಂಜೆ 6 ರಿಂದ 7.30ರ ವರೆಗೆ ಅರಮನೆ ಮುಂಭಾಗದಲ್ಲಿ ಕಾರುಗಳ ಪ್ರದರ್ಶನ ನಡೆಯಲಿದೆ. ಅಕ್ಟೋಬರ್ 1 ರಂದು ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ಹಾಗೂ ಮಧ್ಯಾಹ್ನ ಕೆಆರ್ಎಸ್ಗೆ ರ್ಯಾಲಿ ನಡೆಯಲಿದೆ ಎಂದರು.

ಸುಮಾರು 13 ವರ್ಷಗಳ ಹಿಂದೆ ದಸರಾ ಅವಧಿಯಲ್ಲಿ ಇದೇ ರೀತಿಯ ವಿಂಟೇಜ್ ಕಾರು ರ್ಯಾಲಿ ಆಯೋಜಿಸಲಾಗಿತ್ತು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.