ಚೆನ್ನೈ: ಭಾರತದ ಗ್ರ್ಯಾಂಡ್ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಲೆಜೆಂಡ್ಸ್ ಆಫ್ ಚೆಸ್ ಟೂರ್ನಿಯಲ್ಲಿ ಮತ್ತೊಮ್ಮೆ ಸೋತಿದ್ದಾರೆ. ಶನಿವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಅವರು 2–3ರಿಂದ ಹಂಗರಿಯ ಪೀಟರ್ ಲೇಕೊ ವಿರುದ್ಧ ಪರಾಭವಗೊಂಡರು. ಇದು ಆನಂದ್ ಅವರಿಗೆ ಎದುರಾದ ಸತತ ಐದನೇ ಸೋಲು.

’ಬೆಸ್ಟ್ ಆಫ್ ಫೋರ್‘ ಮಾದರಿ ಸ್ಪರ್ಧೆಯ ಮೊದಲ ಗೇಮ್ನಲ್ಲಿ ಆನಂದ್ ಶುಭಾರಂಭ ಮಾಡಿದರು. ಎರಡು ಮತ್ತು ಮೂರನೇ ಗೇಮ್ಗಳು ಡ್ರಾನಲ್ಲಿ ಅಂತ್ಯವಾದವು. ನಾಲ್ಕನೇ ಗೇಮ್ನಲ್ಲಿ ಗೆಲುವು ಸಾಧಿಸುವ ಮೂಲಕ ಲೇಕೊ, ಪಂದ್ಯದಲ್ಲಿ ಸಮಬಲ ಸಾಧಿಸಿದರು. ಆದರೆ ಟೈಬ್ರೇಕ್ನಲ್ಲಿಆನಂದ್ ಅವರು ಲೇಕೊ ಅವರಿಗೆ ಮತ್ತೊಮ್ಮೆ ಮಣಿದು ಪಂದ್ಯ ಕೈಚೆಲ್ಲಬೇಕಾಯಿತು.

ಆನ್ಲೈನ್ ಮೂಲಕ ನಡೆಯುತ್ತಿರುವ ಟೂರ್ನಿಯಲ್ಲಿ ಸದ್ಯ ಒಂದೂ ಪಂದ್ಯ ಗೆಲ್ಲದ ಆನಂದ್ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ.

ಮ್ಯಾಗ್ನಸ್ ಕಾರ್ಲ್ಸನ್ ಚೆಸ್ ಟೂರ್ನಲ್ಲಿ ಮೊದಲ ಬಾರಿ ಆಡುತ್ತಿರುವ ಆನಂದ್, ಮೊದಲ ನಾಲ್ಕು ಸುತ್ತುಗಳಲ್ಲಿ ಕ್ರಮವಾಗಿ ಪೀಟರ್ ಸ್ವಿಡ್ಲರ್, ಮ್ಯಾಗ್ನಸ್ ಕಾರ್ಲಸನ್, ವ್ಲಾಡಿಮಿರ್ ಕ್ರಾಮ್ನಿಕ್ ಹಾಗೂ ಅನೀಶ್ ಗಿರಿ ಎದುರು ಸೋತಿದ್ದರು.

ಮತ್ತೊಂದು ಹಣಾಹಣಿಯಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರು, ಆರಂಭದ ಹಿನ್ನಡೆಯಿಂದ ಚೇತರಿಸಿಕೊಂಡು 3–2ರಿಂದ ವಾಸಿಲ್ ಇವಾನ್ಚುಕ್ ಅವರನ್ನು ಮಣಿಸಿದರು. ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಕಾರ್ಲ್ಸನ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.