ಬೆಂಗಳೂರು: ಕರ್ನಾಟಕ ಬಾಲಕಿಯರ ತಂಡದವರು ಚೆನ್ನೈನಲ್ಲಿ ನಡೆದ 49ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಷಿಪ್‌ನ ವಾಟರ್‌ಪೋಲೊ ಸ್ಪರ್ಧೆಯಲ್ಲಿ ‘ರನ್ನರ್ ಅಪ್’ ಆದರು.

ಶನಿವಾರ ನಡೆದ ಫೈನಲ್‌ನಲ್ಲಿ ಕೇರಳ ತಂಡ, 16–7 ರಿಂದ ಕರ್ನಾಟಕ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು. ಸಫ್ವಾ ಸಕೀರ್ (6) ಅವರು ಕೇರಳ ಗೆಲುವಿನಲ್ಲಿ ಮಿಂಚಿದರು.

ಬಾಲಕರ ತಂಡದವರು ನಾಲ್ಕನೇ ಸ್ಥಾನ ಪಡೆದರು. 3 ಮತ್ತು 4ನೇ ಸ್ಥಾನ ನಿರ್ಣಯಿಸಲು ನಡೆದ ಪಂದ್ಯದಲ್ಲಿ ರಾಜ್ಯದ ಬಾಲಕರು 2–42 ರಿಂದ ಬಂಗಾಳ ಎದುರು ಪರಾಭವಗೊಂಡಿತು.

ಬಾಲಕರ ವಿಭಾಗದ ಪ್ರಶಸ್ತಿಯನ್ನೂ ಕೇರಳ ಜಯಿಸಿತು. ಫೈನಲ್‌ನಲ್ಲಿ 17–15 ರಿಂದ ಮಹಾರಾಷ್ಟ್ರ ತಂಡವನ್ನು ಮಣಿಸಿತು.

ಬಾಲಕಿಯರ ವಿಭಾಗದಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ನಿರ್ಣಯಿಸಲು ನಡೆದ ಪಂದ್ಯದಲ್ಲಿ ಮಹಾರಾಷ್ಟ್ರ 12–6 ರಿಂದ ಬಂಗಾಳ ತಂಡವನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.