ಮಸ್ಕತ್ : ಹಾಲಿ ಚಾಂಪಿಯನ್ ಭಾರತ ತಂಡ, ಮಹಿಳಾ ಜೂನಿಯರ್ ಏಷ್ಯಾ ಕಪ್ ಹಾಕಿ ಟೂರ್ನಿ ಪಂದ್ಯದಲ್ಲಿ ಬುಧವಾರ ಮೂರು ಬಾರಿಯ ಚಾಂಪಿಯನ್ ಚೀನಾ ತಂಡದ ಎದುರು 1–2 ಗೋಲುಗಳ ಸೋಲು ಅನುಭವಿಸಿತು.

ಚೀನಾ 9 ಪಾಯಿಂಟ್ಗಳೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಭಾರತ ಆರು ಪಾಯಿಂಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಭಾರತ ಗುರುವಾರ ನಡೆಯುವ ಗುಂಪಿನ ಕೊನೆಯ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ.

ಹಾಕಿ ಒಮಾನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೀನಾ ಪರ ನಾಯಕಿ ತಾನ್ ಜಿಂಝ್ಹುವಾಂಗ್ (32ನೇ ನಿಮಿಷ) ‘ಪೆನಾಲ್ಟಿ ಸ್ಟ್ರೋಕ್’ ಮೂಲಕ ಮೊದಲ ಗೋಲು ಗಳಿಸಿದರು. ವಾಂಗ್ ಲಿಹಾಂಗ್ 42 ನಿಮಿಷ ಮುನ್ನಡೆ ಹೆಚ್ಚಿಸಿದರು. ಭಾರತ ಕಡೆ ಕೊನೆಯ ಕ್ವಾರ್ಟರ್ನಲ್ಲಿ ದೀಪಿಕಾ (56ನೇ ನಿಮಿಷ) ಸೋಲಿನ ಅಂತರ ಕಡಿಮೆ ಮಾಡಿದರು.

ಶನಿವಾರ ಸೆಮಿಫೈನಲ್ ಪಂದ್ಯಗಳು ನಿಗದಿಯಾಗಿವೆ. ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.