ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಮಹಿಳಾ ಹಾಕಿ: ಭಾರತಕ್ಕೆ 11–0 ಜಯ

Published 9 ಜೂನ್ 2023, 4:31 IST
Last Updated 9 ಜೂನ್ 2023, 4:31 IST
ಅಕ್ಷರ ಗಾತ್ರ

ಕಾಕರಾಮಿಗಾರ (ಜಪಾನ್‌): ಭಾರತ ಜೂನಿಯರ್‌ ಮಹಿಳಾ ತಂಡ ಗುರುವಾರ ನಡೆದ ಏಷ್ಯಾ ಕಪ್‌ ಹಾಕಿ ಟೂರ್ನಿ ಪಂದ್ಯದಲ್ಲಿ 11–0 ಯಿಂದ ಚೀನಾ ತೈಪೆ ತಂಡವನ್ನು ಬಗ್ಗುಬಡಿದು ಸೆಮಿಫೈನಲ್‌ ಪ್ರವೇಶ ಖಚಿತಪಡಿಸಿಕೊಂಡಿತು.

ಭಾರತ ‘ಎ’ ಗುಂಪಿನಲ್ಲಿ ಅಜೇಯ ಸಾಧನೆಯೊಡನೆ ಅಗ್ರಸ್ಥಾನ ಪಡೆಯಿತು. ಮೂರು ಪಂದ್ಯಗಳನ್ನು ಗೆದ್ದು, ಒಂದನ್ನು ‘ಡ್ರಾ’ ಮಾಡಿಕೊಂಡಿತು.

ಆರಂಭದಿಂದಲೇ ಎದುರಾಳಿ ಗೋಲಿನತ್ತ ದಾಳಿ ನಡೆಸಿದ ಭಾರತ ಪಂದ್ಯದ ಬಹುಭಾಗ ನಿಯಂತ್ರಣ ಹೊಂದಿತ್ತು. ಮೊದಲ ಕ್ವಾರ್ಟರ್‌ನಲ್ಲೇ 4 ಗೋಲುಗಳ ಮುನ್ನಡೆ ಸಾಧಿಸಿತು.

ವೈಷ್ಣವಿ ವಿಠ್ಠಲ್ ಫಾಲ್ಕೆ (1ನೇ ನಿಮಿಷ), ದೀಪಿಕಾ (3ನೇ), ಅನ್ನು (10 ಮತ್ತು 52ನೇ), ರುತುಜಾ ದಾದಸೊ ಪಿಸಾಳ್ (12ನೇ), ನೀಲಮ್‌ (19ನೇ), ಮಂಜು ಚೋರ್ಸಿಯಾ (33ನೇ), ಸುನೆಲಿಟಾ ಟೊಪ್ಪೊ (43, 57ನೇ ನಿಮಿಷ), ದೀಪಿಕಾ ಸೋರೆಂಗ್‌ (46ನೇ) ಮತ್ತು ಮುಮ್ತಾಜ್‌ ಖಾನ್‌ (55ನೇ) ಭಾರತ ತಂಡದ ಗೋಲುಗಳನ್ನು ಗಳಿಸಿದರು.

ಭಾರತ ಶನಿವಾರ ನಡೆಯುವ ಪಂದ್ಯದಲ್ಲಿ ಜಪಾನ್‌ ಅಥವಾ ಕಜಕಸ್ತಾನ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT