ನವದೆಹಲಿ: ಇಟಲಿಯ ಗಿಯಾನ್ಲುಯಿಗಿ ಮಲಂಗ ಅವರ ಎದುರು ಬಹುತೇಕ ಪರಿಪೂರ್ಣ ನಿರ್ವಹಣೆ ತೋರಿದ ಭಾರತದ ಅಭಿನಾಶ್ ಜಾಮವಾಲ್ ಅವರು ಬ್ರೆಜಿಲ್ನ ಇಗವಾಕು ನಗರದಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಕಪ್ ಟೂರ್ನಿಯ 67 ಕೆ.ಜಿ. ವಿಭಾಗದ ಫೈನಲ್ಗೆ ಲಗ್ಗೆಯಿಟ್ಟರು.

ಶುಕ್ರವಾರ ನಡೆದ ಸೆಣಸಾಟದಲ್ಲಿ 22 ವರ್ಷ ವಯಸ್ಸಿನ ಅಭಿನಾಶ್, ತಮ್ಮ ಎತ್ತರ, ವೇಗ ಬಳಸಿ ಮಲಂಗಾ ಎದುರು ಮೇಲುಗೈ ಸಾಧಿಸಿದರು. ಅಂತಿಮವಾಗಿ 5–0 ಸರ್ವಾನುಮತದ ಆಧಾರದಲ್ಲಿ ಜಯಶಾಲಿಯಾದರು. ಐವರಲ್ಲಿ ನಾಲ್ವರು ತೀರ್ಪುಗಾರರು ಅವರಿಗೆ ‘ಪರಿಪೂರ್ಣ 30’ ಅಂಕ ನೀಡಿದರು.

ಮಲಂಗ ಅವರು ಮೊದಲ ಸುತ್ತಿನಲ್ಲೇ ಕೌಂಟ್ಡೌನ್ ಎದುರಿಸಬೇಕಾಯಿತು. ಸೆಣಸಾಟದ ಉಳಿದ ಅವಧಿಯಲ್ಲೂ ಅಭಿನಾಶ್ ಮೇಲುಗೈ ಉಳಿಸಿಕೊಂಡರು.

70 ಕೆ.ಜಿ. ವಿಭಾಗದಲ್ಲಿ ಹಿತೇಶ್ ಅವರು ಒಲಿಂಪಿಕ್ ಚಾಂಪಿಯನ್, ಫ್ರಾನ್ಸ್ನ ಮಕನ್ ಟ್ರಾವೊರ್ ಅವರನ್ನು ಸೋಲಿಸಿ ಫೈನಲ್ ತಲುಪಿದ್ದ ಭಾರತದ ಮೊದಲ ಸ್ಪರ್ಧಿ ಎನಿಸಿದ್ದರು. ಅವರು ಫೈನಲ್ನಲ್ಲಿ ಇಂಗ್ಲೆಂಡ್ನ ಒಡೆಲ್ ಕಮರಾ ಅವರನ್ನು ಎದುರಿಸಲಿದ್ದಾರೆ.

ಅಭಿನಾಶ್ ಅವರು 65 ಕೆ.ಜಿ. ವಿಭಾಗದ ಫೈನಲ್ನಲ್ಲಿ ಸ್ಥಳೀಯ ಫೆವರೀಟ್ ಆಗಿರುವ ಯೂರಿ ರೀಸ್ ಅವರನ್ನು ಎದುರಿಸಲಿದ್ದಾರೆ.

ಆದರೆ 55 ಕೆ.ಜಿ. ವಿಭಾಗದಲ್ಲಿ ಭಾರತದ ಮನೀಷ್ ರಾಥೋಡ್ ಅವರ ಅಭಿಯಾನ ಸೆಮಿಫೈನಲ್ ಹಂತದಲ್ಲಿ ಅಂತ್ಯಗೊಂಡಿತು. ಅವರು 0:5 ರಲ್ಲಿ ಕಜಕಸ್ತಾನದ ನೂರ್ಸುಲ್ತಾನ್ ಅಲ್ತಿನ್ಬೆಕ್ ಎದುರು ಸೋಲನುಭವಿಸಿದರು.

ಇದು ವಿಶ್ವ ಬಾಕ್ಸಿಂಗ್ ಏರ್ಪಡಿಸುತ್ತಿರುವ ಎಲೀಟ್ ಬಾಕ್ಸಿಂಗ್ ಸ್ಪರ್ಧೆಯಾಗಿದ್ದು, 10 ಮಂದಿಯ ಭಾರತ ತಂಡ ಭಾಗವಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.