ಹುಬ್ಬಳ್ಳಿ: ಜರ್ಮನಿಯಲ್ಲಿ ನಡೆಯುತ್ತಿರುವ ಕುಬ್ಜರ ಎಂಟನೇ ವಿಶ್ವ ಕ್ರೀಡಾಕೂಟದ ಮೊದಲ ದಿನವಾದ ಶನಿವಾರ ಭಾರತದ ಕ್ರೀಡಾಪಟುಗಳು ತಲಾ ಒಂದು ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.
ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ (75 ಕೆಜಿ ವಿಭಾಗ) 97.5 ಕೆ.ಜಿ ಭಾರ ಎತ್ತಿದ ಬೆಂಗಳೂರಿನ ತುಳಸಿಧರ ಜಿ.ಎಚ್ ಅವರು ಚಿನ್ನದ ಪದಕ ಮುಡಿಗೇರಿಸಿಕೊಂಡರು.
ಇದೇ ಸ್ಪರ್ಧೆಯ 45 ಕೆ.ಜಿ ವಿಭಾಗದಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕದ್ರಿಪುರ ಗ್ರಾಮದ ನಾಗೇಶ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ನಾಗೇಶ್ 68 ಕೆಜಿ ಭಾರ ಎತ್ತಿದರು.
ವಾಲಿಬಾಲ್ ಸ್ಪರ್ಧೆಯ ಲೀಗ್ ಹಂತದಲ್ಲಿ ಭಾರತ ಪುರುಷರ ತಂಡವು ನೆದರ್ಲೆಂಡ್ಸ್ ವಿರುದ್ಧ 2–0 ಯಿಂದ ಗೆಲುವು ಸಾಧಿಸಿತು. ಜರ್ಮನಿ ವಿರುದ್ಧ 0–2 ಮತ್ತು ಸ್ಪೇನ್ ಎದುರು 1–2 ರಿಂದ ಸೋಲನುಭವಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.