ಬೆಂಗಳೂರು: ಕೊನೆಯ ಫ್ರೇಮ್‌ನಲ್ಲಿ ತೀವ್ರ ಹೋರಾಟ ಎದುರಿಸಿ ಯಶಸ್ವಿಯಾದ ಪೋಲೆಂಡ್‌ನ ಮೈಕೆಲ್ ಝುಬರ್‌ಸಿಸ್ಕ್, ವಿಶ್ವ ಪುರುಷರ (21 ವರ್ಷದೊಳಗಿನ) ಸ್ನೂಕರ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಶುಕ್ರವಾರ ಇರಾನ್‌ನ ತೀರ್ದಾದ್ ಅಝಾದಿಪೌರ್ ಅವರನ್ನು ಸೋಲಿಸಿ ಫೈನಲ್ ತಲುಪಿದರು.
ಕರ್ನಾಟಕ ಬಿಲಿಯರ್ಡ್ಸ್ ಸಂಸ್ಥೆಯಲ್ಲಿ ಶುಕ್ರವಾರ ನಡೆದ ‘ಬೆಸ್ಟ್ ಆಫ್ 9 ಫ್ರೇಮ್‌ಗಳ’ ಸೆಮಿಫೈನಲ್‌ನಲ್ಲಿ 13 ವರ್ಷ ವಯಸ್ಸಿನ ಮೈಕೆಲ್ ಅವರು 5–4 ರಿಂದ (24–76, 97 (59)–00, 34–59, 67–47, 58–49, 74–37, 41–88 (88), 46–57, 48–24 ರಿಂದ 20 ವರ್ಷ ವಯಸ್ಸಿನ ಇರಾನ್ ಆಟಗಾರರನ್ನು ಸೋಲಿಸಿದರು.
ಇನ್ನೊಂದು ಸೆಮಿಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ವಿಡೌ ಅವರು 5–3 ಫ್ರೇಮ್‌ಗಳಿಂದ (67–59, 43–68, 46–73, 104 (104)–28, 41–56, 81 (67)–06, 61–8, 69–24) ಥಾಯ್ಲೆಂಡ್‌ನ ಲೊಮ್‌ನೌ ಇಸಾರಂಗ್‌ಕುನ್ ಅವರನ್ನು ಮಣಿಸಿದರು.