ಸಿಂಗಪುರ: ವಿಶ್ವ ಈಜು ಚಾಂಪಿಯನ್ಷಿಪ್ನಲ್ಲಿ ಭಾರತದ ಆರ್ಯನ್ ನೆಹ್ರಾ ಮತ್ತು ಎಸ್.ಪಿ. ಲಿಖಿತ್ ಅವರು ಇಂದು (ಭಾನುವಾರ) ಆರಂಭವಾದ ತಮ್ಮ ತಮ್ಮ ಸ್ಪರ್ಧೆಗಳಲ್ಲಿ ಹೆಚ್ಚಿನ ಸಾಧನೆ ತೋರಲಿಲ್ಲ.

ಚಾಂಪಿಯನ್ಷಿಪ್ನಲ್ಲಿ ಆರ್ಯನ್ ಫೈನಲ್ಗೆ ಅರ್ಹತೆ ಪಡೆಯಲು ವಿಫಲರಾದರೆ, ಲಿಖಿತ್ ತಮ್ಮ ಸ್ಪರ್ಧೆಯ ಸೆಮಿಫೈನಲ್ ಸಹ ತಲುಪಲಾಗಲಿಲ್ಲ.

ಪುರುಷರ 400 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ನೆಹ್ರಾ 4ನಿ.00.39 ಸೆ.ಗಳಲ್ಲಿ ದೂರವನ್ನು ಕ್ರಮಿಸಿ ಹೀಟ್ನಲ್ಲಿ ಏಳನೇ ಸ್ಥಾನ ಮತ್ತು ಒಟ್ಟಾರೆ 37ನೇ ಸ್ಥಾನ ಗಳಿಸಿದರು. ಮೊದಲ ಎಂಟು ಸ್ಥಾನ ಉತ್ತಮ ಅವಧಿ ಸಾಧಿಸಿದವರು ಫೈನಲ್ ಪ್ರವೇಶಿಸಿದರು. ಆಸ್ಟ್ರೇಲಿಯಾದ ಸಾಮ್ಯುಯೆಲ್ ಶಾರ್ಟ್ ಅವರು 3ನಿ.42.07 ಸೆ.ಗಳೊಂದಿಗೆ ಹೀಟ್ಸ್ನಲ್ಲಿ ಅತಿ ವೇಗದ ಸಮಯ ದಾಖಲಿಸಿದರು.

ಪುರುಷರ 100 ಮೀ. ಬ್ರೆಸ್ಟ್ ಸ್ಟ್ರೋಕ್ನಲ್ಲಿ ಕಣಕ್ಕೆ ಇಳಿದ ಲಿಖಿತ್ 1ನಿ.01.99 ಸೆ.ಗಳಲ್ಲಿ ಗುರಿತಲುಪಿ ಒಟ್ಟಾರೆ 40ನೇ ಸ್ಥಾನ ಪಡೆದರು. ಈ ಸ್ಪರ್ಧೆಯಲ್ಲಿ ಅತಿ ವೇಗವಾಗಿ ಈಜಿದ 16 ಮಂದಿ ಸೆಮಿಫೈನಲ್ಗೆ ಅರ್ಹತೆ ಪಡೆದರು. ಟರ್ಕಿಯ ನುಸ್ರತ್ ಅಲ್ಲಾವೆರ್ದಿ 1ನಿ.01.11 ಸೆ.ಗಳಲ್ಲಿ ಗುರಿಮುಟ್ಟಿ ಹೀಟ್ಸ್ನಲ್ಲಿ ಅತ್ಯುತ್ತಮ ಕಾಲಾವಧಿ ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.