ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Zurich Diamond League: ಡೈಮಂಡ್ ಲೀಗ್‌ನಲ್ಲಿ ಎಡವಿದ ನೀರಜ್ ಚೋಪ್ರಾಗೆ ಬೆಳ್ಳಿ

Published 1 ಸೆಪ್ಟೆಂಬರ್ 2023, 1:54 IST
Last Updated 1 ಸೆಪ್ಟೆಂಬರ್ 2023, 1:54 IST
ಅಕ್ಷರ ಗಾತ್ರ

ಜ್ಯೂರಿಚ್: ವಿಶ್ವ ಚಾಂಪಿಯನ್ ಜಾವೆಲಿನ್ ಅಥ್ಲೀಟ್ ನೀರಜ್ ಚೋಪ್ರಾ ಅವರು ಡೈಮಂಡ್ ಲೀಗ್ ಕೂಟದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

85.71 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಜೆಕ್ ಗಣರಾಜ್ಯದ ಯಾಕೂಬ್ ವಡ್ಲೆಚ್ ಅವರು 85.86 ಮೀ ಮೀಟರ್ ದೂರ ಜಾವೆಲಿನ್ ಥ್ರೋ ಮಾಡಿ ಚಿನ್ನದ ಪದಕ ಗಳಿಸಿದರೆ, ಇತ್ತ ಜರ್ಮನಿಯ ಜೂಲಿಯನ್ ವೆಬರ್ 85.04 ಮೀಟರ್ ಎಸೆದು ಮೂರನೇ ಸ್ಥಾನ ಪಡೆದಿದ್ದಾರೆ.

ಕಳೆದ ಬಾರಿ ನಡೆದ ಡೈಮಂಡ್ ಲೀಗ್ ಕೂಟದಲ್ಲಿ ನೀರಜ್, ಚಾಂಪಿಯನ್ ಆಗಿದ್ದರು.

ಇತ್ತೀಚೆಗೆ ಬುಡಾಪೆಸ್ಟ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪುರುಷರ ವಿಭಾಗದಲ್ಲಿ ನೀರಜ್ 88.17 ಮೀಟರ್ಸ್ ದೂರ ಜಾವೆಲಿನ್ ಥ್ರೋ ಮಾಡಿ ಚಿನ್ನದ ಪದಕ ಜಯಿಸಿದ್ದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರೀಡಾಪಟುವಾಗಿದ್ದರು. 2022ರಲ್ಲಿ ಅವರು ಬೆಳ್ಳಿ ಗಳಿಸಿದ್ದರು.

ಅಲ್ಲದೇ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಚಿನ್ನ ಗೆದ್ದ ವಿಶ್ವದ ಮೂರನೇ ಜಾವೆಲಿನ್ ಥ್ರೋ ಅಥ್ಲೀಟ್ ಆಗಿದ್ದಾರೆ. ಜೆಕ್ ಗಣರಾಜ್ಯದ ಜಾನ್ ಜೆಲೆನ್‌ಸ್ಕಿ ಮತ್ತು ನಾರ್ವೆಯ ಆ್ಯಂಡ್ರೀಸ್ ಥ್ರೊಕಿಲ್ಡ್‌ಸನ್  ಅವರ ನಂತರ ನೀರಜ್ ಸ್ಥಾನ ಪಡೆದಿದ್ದಾರೆ.

ಈ ಬಾರಿಯ ಡೈಮಂಡ್ ಲೀಗ್ ಋತುವಿನಲ್ಲಿ 25 ವರ್ಷದ ನೀರಜ್ ಅಜೇಯರಾಗಿದ್ದಾರೆ. ದೋಹಾ (ಮೇ 5) ಮತ್ತು ಲೂಸಾನ್‌ನಲ್ಲಿ (ಜೂನ್ 30) ನಡೆದ ಆವೃತ್ತಿಗಳಲ್ಲಿ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT