ನವದೆಹಲಿ (ಪಿಟಿಐ): ವಿಶ್ವ ಚಾಂಪಿಯನ್‌ಷಿಪ್ ಸೇರಿದಂತೆ ಮುಂಬರುವ ಹಲವು ಟೂರ್ನಿಗಳಿಗೆ ಸಜ್ಜಾಗುವ ಉದ್ದೇಶದಿಂದ ಭಾರತದ ಬಾಕ್ಸರ್‌ಗಳು ಇಟಲಿ, ಐರ್ಲೆಂಡ್ ಹಾಗೂ ಕೊರಿಯಾ ದೇಶಗಳ ಪ್ರವಾಸ ಕೈಗೊಂಡಿದ್ದಾರೆ.

ಇಟಲಿಯಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ತಂಡ ಸ್ಥಳೀಯ ತಂಡದ ಜೊತೆ ಸೌಹಾರ್ದ ಪಂದ್ಯಗಳನ್ನೂ ಆಡಲಿದೆ.

ಇನ್ನೊಂದೆಡೆ ಭಾರತದ ಪ್ರಮುಖ ಬಾಕ್ಸರ್‌ಗಳು ಸದ್ಯ ಐರ್ಲೆಂಡ್‌ನ ಬೆಲ್‌ಫಾಸ್ಟ್‌ನಲ್ಲಿ ತರಬೇತಿಯಲ್ಲಿ ನಿರತರಾಗಿದ್ದಾರೆ. ಅವರೊಂದಿಗೆ ಯುರೋಪಿನ ಐದು ಪ್ರಮುಖ ರಾಷ್ಟ್ರಗಳ ಬಾಕ್ಸರ್‌ಗಳೂ ಇದ್ದಾರೆ. ಜೂನ್ 12ರಂದು ಈ ಪ್ರವಾಸ ಮುಗಿಯಲಿದೆ.

ಅಮೆರಿಕ, ಜರ್ಮನಿ, ಹಾಲೆಂಡ್, ರುಮೇನಿಯಾ, ಇಟಲಿ ಹಾಗೂ ಆತಿಥೇಯ ಐರ್ಲೆಂಡ್ ದೇಶಗಳ ಬಾಕ್ಸರ್‌ಗಳ ಅನುಭವಗಳನ್ನು ಪಡೆದುಕೊಳ್ಳುವುದು ಪ್ರವಾಸದ ಉದ್ದೇಶವಾಗಿದೆ.

20 ಪುರುಷ ಹಾಗೂ 15 ಮಹಿಳೆಯರನ್ನು ಒಳಗೊಂಡ 35 ಬಾಕ್ಸರ್‌ಗಳ ತಂಡ ಸದ್ಯ ದಕ್ಷಿಣ ಕೊರಿಯಾದ ಇಂಚೇನ್‌ನಲ್ಲಿದ್ದು, ಅಲ್ಲಿಯ ತಂಡದೊಂದಿಗೆ ಜಂಟಿ ತರಬೇತಿಯಲ್ಲಿ ನಿರತವಾಗಿದೆ.

ಮುಂದಿನ ತಿಂಗಳಿನಿಂದ ಹಲವು ಪ್ರಮುಖ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಗಳು ಆಯೋಜನೆಯಾಗಿದ್ದು, ಇಂತಹ ಪ್ರವಾಸಗಳು ಭಾರತದ ಪದಕ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.